More

    ಹುತಾತ್ಮ ಮಹದೇವ ಮೈಲಾರ, ಡಾ. ಮಹದೇವ ಬಣಕಾರ ಕಂಚಿನ ಪುತ್ಥಳಿ ಅನಾವರಣ

    ಬ್ಯಾಡಗಿ: ಮಹಾತ್ಮರು, ಸಾಧಕರ ಜೀವನ ಚರಿತ್ರೆ ಸ್ಮರಣೆಯ ಮೂಲಕ ಅವರ ಆದರ್ಶ ರೂಢಿಸಿಕೊಳ್ಳಬೇಕಿದೆ ಎಂದು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶ್ರೀಗಳು ಹೇಳಿದರು.

    ತಾಲೂಕಿನ ಮೋಟೆಬೆನ್ನೂರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹುತಾತ್ಮ ಮಹದೇವ ಮೈಲಾರ ಹಾಗೂ ಡಾ. ಮಹದೇವ ಬಣಕಾರ ಕಂಚಿನ ಪುತ್ಥಳಿ ಅನಾವರಣ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವನ ತ್ಯಾಗದ ಮೂಲಕ ಮೈಲಾರ ಮಹದೇವಪ್ಪ ನಾಡಿನಾದ್ಯಂತ ಹೋರಾಟದ ಕಿಚ್ಚು ಹಚ್ಚಿದ್ದರು. ಮಹಾತ್ಮ ಗಾಂಧೀಜಿ ಅವರೊಂದಿಗೆ ಸಾಬರಮತಿ ಆಶ್ರಮದಲ್ಲಿಯೂ ತಮ್ಮ ಜೀವನ ಕಳೆದ ಅವರು, ಕೊನೆಗೆ ತಮ್ಮ ಜೀವ ಬಲಿ ಕೊಟ್ಟಿದ್ದಾರೆ. ಇಂತಹ ಮಹಾತ್ಮರ ಜೀವನವನ್ನು ಆದರ್ಶವಾಗಿಟ್ಟುಕೊಂಡು ನಾವು ಮುಂದುವರಿಯಬೇಕಿದೆ ಎಂದರು.

    ಸಾಹಿತಿ ಮಹದೇವ ಬಣಕಾರ ಅವರು ವಚನ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ಅವರ ಬಹುತೇಕ ಸಾಹಿತ್ಯ ಪುಸ್ತಕಗಳು ಸಮಾಜದ ಮೇಲೆ ಬೆಳಕು ಚೆಲ್ಲುವಂತಿವೆ. ಇಂತಹ ಸಾಧಕರ ಮೂರ್ತಿಯನ್ನು ಗ್ರಾಮಸ್ಥರು ಕಾಳಜಿಯಿಂದ ಸ್ಥಾಪನೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸ ಸಾರಿದ್ದಾರೆ. ಮೋಟೆಬೆನ್ನೂರಿನ ಮಣ್ಣಿನಲ್ಲಿ ಹೋರಾಟದ ಗುಣವಿದ್ದು, ಬಹುತೇಕರು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.

    ವಿಜಯಭರತ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಮ್ಮ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟನೆ ನೆರವೇರಿಸಿದರು. ಶಿವಪ್ಪ ಕುಳೇನೂರು ಅಧ್ಯಕ್ಷತೆ ವಹಿಸಿದ್ದರು. ಮೂರ್ತಿ ಕಲಾವಿದ ಹರೀಶ ಮಾಳಪ್ಪನವರ ಅವರನ್ನು ಸನ್ಮಾನಿಸಲಾಯಿತು.

    ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಸುರೇಶಗೌಡ್ರ ಪಾಟೀಲ, ಎಸ್.ಆರ್. ಪಾಟೀಲ, ಕಸ್ತೂರಮ್ಮ ಎಚ್.ಎಸ್., ನರೇಂದ್ರ ಎಚ್.ಎಸ್., ಮಹದೇವ ಎಚ್.ಎಸ್., ಉಮೇಶ ಬಣಕಾರ, ಅಶೋಕ ಬಣಕಾರ, ಪುಷ್ಪಾ ಬಣಕಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts