More

    ಅನಾದಿ ಕಾಲದಿಂದ ಸ್ತ್ರೀಯರಿಗಿದೆ ಸ್ಥಾನಮಾನ

    ಸೊರಬ: ಪುರಾತನ ಕಾಲದಿಂದಲೂ ಋಷಿ ಮುನಿಗಳು ಸಂತರು, ದಾರ್ಶನಿಕರು ಮಹಿಳೆಯರನ್ನು ಗೌರವಿಸುತ್ತ ಬಂದಿದ್ದಾರೆ. ಈಗಲೂ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಜಡೆ ಸಂಸ್ಥಾನ, ಸೊರಬ ಮುರುಘಾ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

    ಪಟ್ಟಣದ ಮುರುಘಾ ಮಠದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಮಹಿಳೆಗಿದೆ. ಸಂಸ್ಕೃತಿ, ಸಂಸ್ಕಾರ ಹೊಂದಿದ ಮಹಿಳೆಯರು ನಾಡನ್ನು ಪರಿವರ್ತಿಸುವ, ಕಟ್ಟುವ ಶಕ್ತಿ ಹೊಂದಿದ್ದಾರೆ. ಸ್ವಾತಂತ್ರ್ಯ ಹೋರಾಟ, ವಚನ ಸಾಹಿತ್ಯ, ಕುಟುಂಬ ನಿರ್ವಹಣೆ, ರಾಜಕಾರಣ, ಉದ್ಯೋಗ, ಸಂಘಟನೆ ಇತರ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್, ಸದೃಢ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹಿರಿದು. ಹಾಗಾಗಿ ಅವಳನ್ನು ಗೌರವದಿಂದ ಕಂಡಾಗ ಮನೆ ಸಂತೃಪ್ತಿಯಿಂದ ಕೂಡಿರುತ್ತದೆ ಎಂದು ಹೇಳಿದರು.
    ಆನವಟ್ಟಿ ಸರ್ಕಾರಿ ಸಮುದಾಯ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸುಪ್ರಿಯಾ, ಕೋಟಿಪುರ ಎವರಾನ್ ಶಾಲೆ ಮುಖ್ಯಸ್ಥೆ ಚರಿತಾ ಕಾರ್ತಿಕ್, ದಂತ ವೈದ್ಯೆ ಪವಿತ್ರಾ ರಾಯ್ಕರ್, ಸಂಗೀತಗಾರ್ತಿ ಲಕ್ಷ್ಮೀ ಮುರಳೀಧರ್, ಮುಖ್ಯ ಪೇದೆ ಎಂ.ಬಿ.ಉಷಾ, ಚಂದ್ರಗುತ್ತಿ ಅಂಗನವಾಡಿ ಕಾರ್ಯಕರ್ತೆ ಕೆ.ಎಸ್.ಜ್ಯೋತಿರ್ಮಾಲಾ ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
    ಪಿಎಸ್‌ಐ ನಾಗರಾಜ್, ವೈದ್ಯೆ ಡಾ. ಬಿ.ಎಂ.ಸೌಭಾಗ್ಯಾ, ಸೊರಬ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಚೇತನಕ್ಕ, ವೇದಿಕೆ ಗೌರವಾಧ್ಯಕ್ಷ ವಿಜಯಕುಮಾರ್ ದಟ್ಟೇರ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು, ತಾಲೂಕು ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಎಸ್.ಮಂಜುನಾಥ್, ಕಾರ್ತಿಕ್ ಸಾಹುಕಾರ್, ಪಾಣಿ ರಾಜಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts