More

    ಕನ್ನಡ ಉಳಿಸುವುದು ಎಲ್ಲರ ಜವಾಬ್ದಾರಿ

    ಸೊರಬ: ಕನ್ನಡ ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕನ್ನಡ ನಾಡು, ನುಡಿ ಉಳಿಸಿ ಬೆಳೆಸುವತ್ತ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಪಾಣಿ ಹೇಳಿದರು.
    ಆನವಟ್ಟಿಯ ವಿಶ್ವಭಾರತಿ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ದಾನಿಗಳ ಕೊಡುಗೆ ಮಹತ್ವದ್ದಾಗಿದೆ. ಅವರು ನೀಡುವ ದತ್ತಿನಿಧಿಯಿಂದ ಕಲೆ, ಸಾಹಿತ್ಯ, ಕೃಷಿ ಇನ್ನಿತರ ವಿಷಯಗಳನ್ನು ಜನರಿಗೆ ತಲುಪಿಸಲು ಅನುಕೂಲವಾಗಿದೆ ಎಂದರು.
    ಬೇಂದ್ರೆ ಸಾಹಿತ್ಯ ಬಗ್ಗೆ ಉಪನ್ಯಾಸ ನೀಡಿದ ಉದ್ಯಮಿ ಸಂಜಯ್ ಡೋಂಗ್ರೆ ಆನವಟ್ಟಿ, ವರಕವಿ ಎಂದೇ ಪ್ರಸಿದ್ಧರಾದ ಬೇಂದ್ರೆ ಮೂಲತಃ ಮರಾಠಿಗರಾದರೂ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ನಾಕುತಂತಿ ಕವನ ಸಂಕಲನ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದೆ ಎಂದು ಪ್ರಮುಖ ಕವನಗಳ ಸಾಲುಗಳ ಕುರಿತು ತಿಳಿಸಿದರು.
    ತೆಲಂಗಾಣ ಕಾಕತೀಯ ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕ ಕೆ.ವಿ.ಕಾಂತಯ್ಯ ಕೃಷಿ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ, ಕೃಷಿಯು ನಾಗರಿಕತೆಯೊಂದಿಗೆ ಬೆಳೆದುಬಂದಿದೆ. ಅಧಿಕ ಇಳುವರಿ ದೃಷ್ಟಿಯಿಂದ ಹೆಚ್ಚು ರಸಗೊಬ್ಬರ, ಕೀಟನಾಶಕ ಬಳಕೆಯಿಂದಾಗಿ ನಾವು ಸೇವಿಸುವ ಆಹಾರ ವಿಷಕಾರಿಯಾಗಿದೆ ಎಂದರು. ಆನವಟ್ಟಿ ಕಸಾಪ ಘಟಕದ ಅಧ್ಯಕ್ಷ ಬಸವನ ಗೌಡ ಮಲ್ಲಾಪುರ, ತಾಲೂಕು ಯುವಜನ ಸಂಘದ ಅಧ್ಯಕ್ಷ ಎಚ್.ಸಿ.ಸಂಪತ್‌ಕುಮಾರ್, ಸೊರಬ ಕಸಾಪ ಕಾರ್ಯದರ್ಶಿ ವಿನಾಯಕ ಕಾನಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts