More

    ಮತ್ತೆ ಗರ್ಭಿಣಿಯಾದ 19 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ‘ಈಕೆಯ ಬಾಳಲ್ಲಿ ಬಂದವರು ಒಬ್ಬರಲ್ಲ, ಇಬ್ಬರಲ್ಲ…’

    ನವದೆಹಲಿ: ಇನ್ನೆಂದಿಗೂ ತಾಯಿಯಾಗುವ ಸಂತೋಷವನ್ನು ಪಡೆಯದ ಅನೇಕ ಮಹಿಳೆಯರು ಜಗತ್ತಿನಲ್ಲಿದ್ದಾರೆ. ಆದರೆ 39 ವರ್ಷಕ್ಕೆ 19 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಸದ್ಯ ಹುಟ್ಟಲಿರುವ ಮಗು ಅವಳ 20ನೇ ಮಗು. ವಿಚಿತ್ರವೆಂದರೆ ಈ ಎಲ್ಲ ಮಕ್ಕಳಿಗೂ ತಂದೆ ಒಬ್ಬರಲ್ಲ, ಬೇರೆ ಬೇರೆ…ಈ ಮಹಿಳೆ ಆ 19 ಮಕ್ಕಳನ್ನು ಒಬ್ಬಂಟಿಯಾಗಿ ಸಾಕುತ್ತಿದ್ದಾರೆ. ಇಷ್ಟೆಲ್ಲ ಆದರೂ, ತನ್ನ ದೇಹವು ತನಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ತಾನು ಮಕ್ಕಳಿಗೆ ಜನ್ಮ ನೀಡುತ್ತಲೇ ಇರುತ್ತೇನೆ ಎಂದು ಮಹಿಳೆ ಹೇಳುತ್ತಾರೆ. ಮಕ್ಕಳನ್ನು ಹೆರುವ ಕೆಲಸವನ್ನು ಅವರು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಪ್ರಸ್ತುತ ಈ ಮಕ್ಕಳ ವೆಚ್ಚವನ್ನು ಸರ್ಕಾರವು ಭರಿಸುತ್ತಿದೆ.

    ಅಪರಿಚಿತ ಪುರುಷರಿಂದ ಗರ್ಭಿಣಿಯಾಗುತ್ತಿರುವ ಮಹಿಳೆ 
    ಡೈಲಿ ಮೇಲ್ ವರದಿಯ ಪ್ರಕಾರ, ಈ ಸುದ್ದಿ ಕೊಲಂಬಿಯಾದ್ದು. ಅಲ್ಲಿ ಮಾರ್ಥಾ ಎಂಬ 39 ವರ್ಷದ ಮಹಿಳೆ ಈಗಾಗಲೇ 19 ಮಕ್ಕಳನ್ನು ಹೊಂದಿದ್ದಾರೆ. ಅವರಲ್ಲಿ 17 ಮಕ್ಕಳು ಇನ್ನೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಮಕ್ಕಳನ್ನು ಹೊಂದುವುದು ಲಾಭದಾಯಕ ಎಂದು ಮಾರ್ಥಾ ಹೇಳುತ್ತಾರೆ. ಅಷ್ಟೇ ಅಲ್ಲ, ಆಕೆ ಮಕ್ಕಳನ್ನು ಹೊಂದುವುದನ್ನು ಮುಂದುವರಿಸುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.

    ಪ್ರತಿ ಮಗುವನ್ನು ಬೆಳೆಸಲು ಸರ್ಕಾರವು ತನಗೆ ಹಣವನ್ನು ನೀಡುತ್ತದೆ ಮತ್ತು ಇದು ಹೆಚ್ಚು ಮಕ್ಕಳನ್ನು ಹೊಂದಲು ಪ್ರೇರೇಪಿಸುತ್ತದೆ ಎಂದು ಮಾರ್ಥಾ ಹೇಳುತ್ತಾರೆ. ಕೊಲಂಬಿಯಾ ಸರ್ಕಾರವು ಮಾರ್ಥಾ ಪ್ರತಿ ಮಗುವನ್ನು ಬೆಳೆಸಲು ಸಹಾಯ ಮಾಡುತ್ತಿದೆ. ಹಿರಿಯ ಮಗುವಿಗೆ ಸುಮಾರು 6,300 ರೂ ಮತ್ತು ಕಿರಿಯ ಮಗುವಿಗೆ ಸುಮಾರು 2,500 ರೂ ಪಡೆಯುತ್ತೇನೆ ಎಂದು ಮಾರ್ಥಾ ಹೇಳಿದ್ದಾರೆ.

    ವೆಚ್ಚ ಭರಿಸುತ್ತಿದೆ ಸರ್ಕಾರ 
    ಮಾರ್ಥಾ ಕೊಲಂಬಿಯಾ ಸರ್ಕಾರದಿಂದ ಪ್ರತಿ ತಿಂಗಳು 42,000 ರೂ. ಪಡೆಯುತ್ತಿದ್ದಾರೆ. ಸ್ಥಳೀಯ ಚರ್ಚ್ ಮತ್ತು ನೆರೆಹೊರೆಯವರು ಸಹ ಅವರಿಗೆ ಸಹಾಯ ಮಾಡುತ್ತಾರೆ. ಆದರೆ 3BHK ಮನೆಯಲ್ಲಿ 19 ಮಕ್ಕಳನ್ನು ಇರಿಸುವುದು ತುಂಬಾ ಕಷ್ಟ. ಎಷ್ಟೋ ಬಾರಿ ಎಲ್ಲಾ ಮಕ್ಕಳಿಗೆ ಊಟ ಕೊಡಲೂ ಆಗುವುದಿಲ್ಲ, ಆದರೂ ತನಗೆ ಮಕ್ಕಳು ಹೆರುವ ಶಕ್ತಿ ಇರುವವರೆಗೂ ಹೆಚ್ಚು ಮಕ್ಕಳನ್ನು ಪಡೆಯುತ್ತೇನೆ ಎಂದು ಮಾರ್ಥಾ ತಿಳಿಸಿದ್ದಾರೆ. 

    ಮುಖೇಶ್ ಅಂಬಾನಿಯವರ ಜಿಯೋ ಪೇಟಿಎಂ ಖರೀದಿಸುತ್ತಿದೆಯೇ?, ಸ್ಪಷ್ಟನೆ ನೀಡಿದ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts