More

    ಮುಖೇಶ್ ಅಂಬಾನಿಯವರ ಜಿಯೋ ಪೇಟಿಎಂ ಖರೀದಿಸುತ್ತಿದೆಯೇ?, ಸ್ಪಷ್ಟನೆ ನೀಡಿದ ಕಂಪನಿ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪೇಟಿಎಂ ಅನ್ನು ನಿಷೇಧಿಸಿದ ನಂತರ, ಜನರು ತಮ್ಮ ಹಣ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬ ಭಯದಲ್ಲಿದ್ದಾರೆ. ಏತನ್ಮಧ್ಯೆ, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಪೇಟಿಎಂನ ವ್ಯಾಲೆಟ್ ವ್ಯವಹಾರವನ್ನು ಖರೀದಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದೀಗ ಈ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ.

    ಪೇಟಿಎಂನ ಮಾಲೀಕ ಕಂಪನಿ One97 ಕಮ್ಯುನಿಕೇಷನ್ಸ್ ಮತ್ತು ಜಿಯೋ ಫೈನಾನ್ಶಿಯಲ್ಸ್ ಈ ವಿಷಯದ ಬಗ್ಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಪೇಟಿಎಂ ಅನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದರೂ, ಈ ನಿಟ್ಟಿನಲ್ಲಿ ಬ್ಯಾಂಕ್ ಯಾವುದೇ ದೃಢೀಕರಣ ನೀಡಿಲ್ಲ.

    ಜಿಯೋ ಫೈನಾನ್ಶಿಯಲ್ ಹೇಳಿದ್ದೇನು? 
    ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಂಪನಿಯಾದ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಸೋಮವಾರ ಈ ಕುರಿತು ಸ್ಪಷ್ಟಪಡಿಸಿದ್ದು, ಪೇಟಿಎಂ ವಾಲೆಟ್ ಖರೀದಿಸುವ ಕುರಿತು One97 ಕಮ್ಯುನಿಕೇಶನ್‌ನೊಂದಿಗೆ ಯಾವುದೇ ರೀತಿಯ ಮಾತುಕತೆಯಾಗಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಎಲ್ಲಾ ಸುದ್ದಿಗಳು ಊಹಾಪೋಹಗಳಾಗಿವೆ. ಅಂತಹ ಯಾವುದೇ ಮಾತುಕತೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಹೇಳಿದೆ.

    ಸ್ಪಷ್ಟನೆ ನೀಡಿದ ಪೇಟಿಎಂ 
    ಈ ನಡುವೆ ಪೇಟಿಎಂ ಕೂಡ ಸ್ಪಷ್ಟನೆ ನೀಡಿದೆ. ಷೇರುಪೇಟೆಗಳು ಕೂಡ ಈ ಬಗ್ಗೆ ಸ್ಪಷ್ಟನೆ ಕೇಳಿದ್ದವು. ಜಿಯೋ ಫೈನಾನ್ಶಿಯಲ್ಸ್ ಜೊತೆಗೆ ಯಾವುದೇ ರೀತಿಯ ಒಪ್ಪಂದದ ಮಾತುಗಳು ಕಟ್ಟುಕಥೆ ಎಂದು ಪೇಟಿಎಂ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳನ್ನು ಆರ್​​​​​​ಬಿಐ ನಿಷೇಧಿಸಿರುವುದು ಗಮನಾರ್ಹ. ಬ್ಯಾಂಕ್ ಯಾವುದೇ ಹೊಸ ಠೇವಣಿಗಳನ್ನು ಸ್ವೀಕರಿಸುವುದಿಲ್ಲ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಗ್ರಾಹಕರಿಗೆ ತಮ್ಮ ಹಣವನ್ನು ಖರ್ಚು ಮಾಡಲು ಆರ್‌ಬಿಐ ಫೆಬ್ರವರಿ 29 ರವರೆಗೆ ಸಮಯ ನೀಡಿದೆ.

    ಹಣಕ್ಕಾಗಿ ಇಂತಹ ನೀಚ ಕೃತ್ಯಕ್ಕಿಳಿದ ಪಾಕಿಸ್ತಾನ…ಟ್ರೆಂಡ್ ಆಯ್ತು ಈ ಹ್ಯಾಶ್​​ಟ್ಯಾಗ್

    “ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುವಿರಾ” ಎಂಬ ಪ್ರಶ್ನೆಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಕೊಟ್ಟ ಉತ್ತರವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts