More

    ಬಿಜೆಪಿ ಶಾಸಕ ನೇಗಿಯೇ ಮಗುವಿನ ಅಪ್ಪ, ಬೇಕಾದ್ರೆ ಡಿಎನ್​ಎ ಟೆಸ್ಟ್ ಮಾಡಿಸಿ- ರೇಪ್ ಪ್ರಕರಣ ದಾಖಲಿಸಿದ ಮಹಿಳೆ

    ಡೆಹ್ರಾಡೂನ್​: ಉತ್ತರಾಖಂಡದ ದ್ವಾರಹಟ್​ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಮಹೇಶ್ ನೇಗಿಯ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಮಹಿಳೆಯೊಬ್ಬರು, ತನ್ನ ಮಗುವಿನ ಅಪ್ಪ ನೇಗಿಯೇ ಆಗಿದ್ದು, ಮಗುವಿನ ಡಿಎನ್​ಎ ಟೆಸ್ಟ್ ಮಾಡಿಸಿ ಬೇಕಾದರೆ ಎಂದು ಸವಾಲೆಸೆದು ದೇಶದ ಗಮನಸೆಳೆದಿದ್ದಾರೆ.

    ಶಾಸಕ ನೇಗಿ 2016 ಮತ್ತು 2018ರ ನಡುವೆ ಅನೇಕ ಸಲ ತನ್ನ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆಯೂ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಈ ನಡುವೆ, ಶಾಸಕ ನೇಗಿಯ ಪತ್ನಿ ಕೂಡ ಮಹಿಳೆಯ ವಿರುದ್ಧ ಪ್ರತಿದೂರು ದಾಖಲಿಸಿದ್ದು, ಆಕೆಯ ವಿರುದ್ಧ ಬ್ಲ್ಯಾಕ್​ಮೇಲ್ ಆರೋಪ ಹೊರಿಸಿದ್ದಾರೆ.

    ಅತ್ಯಾಚಾರ ದೂರು ದಾಖಲಿಸಿರುವ ಮಹಿಳೆ ವಿವಾಹಿತೆಯಾಗಿದ್ದು, ನೆಹರೂ ಕಾಲನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಅತ್ಯಾಚಾರದ ಅಂಶ ಮತ್ತು ಮಗುವಿನ ಡಿಎನ್​ಎ ಪರೀಕ್ಷೆ ನಡೆಸುವಂತೆಯೂ ಅವರು ಕೋರಿದ್ದಾರೆ. ವಿವಾಹಿತ ಮಹಿಳೆ ಶಾಸಕ ನೇಗಿಯ ನೆರೆಯವರಾಗಿದ್ದು, 2016ರಲ್ಲಿ ತನ್ನ ತಾಯಿಗೆ ಆರಾಮ ಇಲ್ಲದೇ ಇದ್ದಾಗ ನೆರವು ಕೋರಿ ಶಾಸಕರನ್ನು ಭೇಟಿಯಾಗಿದ್ದರು. ಇದಾಗಿ, 2016 ಮತ್ತು 2018ರ ನಡುವೆ ಶಾಸಕ ನೇಗಿ ಆಕೆಯನ್ನು ಮುಸ್ಸೋರಿ, ನೈನಿತಾಲ್​, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ಕರೆದೊಯ್ದು ಅನೇಕ ಸಲ ಅತ್ಯಾಚಾರವೆಸಗಿದ್ದಾರೆ. ಈ ವಿಚಾರ ಬಹಿರಂಗ ಪಡಿಸದಂತೆ ನೇಗಿಯವರ ಪತ್ನಿ 25 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದರು ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಡಿಜಿ ಅಶೋಕ್ ಕುಮಾರ್ ತಿಳಿಸಿದ್ದಾರೆ.‘

    ಇದನ್ನೂ ಓದಿ: ಈ ಶಾಸಕಿ ಭಾರತದ ನಕ್ಷೆ ಕಾಪಿ-ಪೇಸ್ಟ್‌ ಮಾಡುವಾಗ ಕಾಶ್ಮೀರ ಬಿಟ್ಟುಹೋಯಿತಂತೆ!

    ಶಾಸಕರ ಪತ್ನಿ ಕೂಡ ನೆಹರು ಕಾಲನಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಪತಿಯನ್ನು ಮಹಿಳೆಯೊಬ್ಬರು ಬ್ಲ್ಯಾಕ್​​ಮೇಲ್ ಮಾಡುತ್ತಿರುವುದಾಗಿ ಆರೋಪಿಸಿದ್ಧಾರೆ. ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಡಿಜಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದರು.
    ಈ ವಿಚಾರವಾಗಿ ಶಾಸಕ ನೇಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರೇಪ್ ಪ್ರಕರಣವೀಗ ರಾಜಕೀಯ ಸಂಚಲನ ಮೂಡಿಸಿದೆ. ಶಾಸಕರ ವಿರುದ್ಧ ಗಂಭೀರ ಆಪಾದನೆ ಎದುರಾಗಿರುವ ಕಾರಣ ಮಗುವಿನ ಡಿಎನ್​ಎ ಟೆಸ್ಟ್ ಮಾಡಿಸಿ. ಆ ಮೂಲಕ ಸತ್ಯ ಬಹಿರಂಗವಾಗಲಿ ಎಂದು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಪ್ರೀತಂ ಸಿಂಗ್ ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ಒಂದೂವರೆ ವರ್ಷದ ಮಗುವನ್ನು ತುಳಿದು, ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಸೊಸೆಯ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts