More

    15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಈಕೆಯ ಮಹಾ ಸುಳ್ಳುಗಳಿಗೆ ಅಂತ್ಯವಾಡಿದ ಕೋರ್ಟ್​!

    ಲಂಡನ್​: ಹದಿನೈದು ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದ ವಿವಾಹಿತ ಶಿಕ್ಷಕಿಗೆ ಇಂಗ್ಲೆಂಡ್​ನ ಅಲೆಸ್ಬರಿ ಕ್ರೌನ್​ ನ್ಯಾಯಾಲಯ 6 ವರ್ಷ 2 ತಿಂಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

    ಕ್ಯಾಂಡೈಸ್​ ಬಾರ್ಬರ್​ (35) ಜೈಲು ಶಿಕ್ಷೆಗೆ ಗುರಿಯಾದ ಶಿಕ್ಷಕಿ. ಮೂರು ಮಕ್ಕಳ ತಾಯಿಯಾದ ಈಕೆ ತನ್ನ ಶಾಲಾ ವಿದ್ಯಾರ್ಥಿಯನ್ನು ಕಾರಿನಲ್ಲಿ ಕರೆದೊಯ್ದು ಮೈದಾನವೊಂದರಲ್ಲಿ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ಸುದೀರ್ಘ ವಿಚಾರಣೆ ಎದುರಿಸಿದ್ದಳು. ಈ ಘಟನೆ 2018ರಲ್ಲಿ ನಡೆದಿತ್ತು.

    ಇದಕ್ಕೂ ಮುನ್ನ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಏನು ಮಾಡಲು ಬಯಸಿದ್ದೀಯ? ಎಂದು ಮೂರು ಮಕ್ಕಳ ತಾಯಿಯೊಬ್ಬಳು ವಿದ್ಯಾರ್ಥಿಯ ಕಿವಿಯಲ್ಲಿ ಪಿಸುಗುಡುವ ಮುನ್ನ ಆತನ ಕುತ್ತಿಗೆಯನ್ನು ಚುಂಬಿಸುವುದಂದೆರೆ ಹೇಗೆ? ಎಂದು ಕೋರ್ಟ್​ ಪ್ರಶ್ನಿಸಿತ್ತು.

    ಇದನ್ನೂ ಓದಿರಿ: ವೀಕ್ಷಕರ ಪ್ರಕಾರ ಈ ಬಾರಿಯ ಬಿಗ್​ಬಾಸ್​ ಮನೆಯಲ್ಲಿ ಭಾರಿ ಸದ್ದು ಮಾಡುವ ಸ್ಪರ್ಧಿಗಳು ಯಾರ‍್ಯಾರು?

    ಬಾಲಕ ಆಗಷ್ಟೇ ಶಾಲೆ ಮುಗಿಸಿದ್ದನು. ಆತನನ್ನು ಮರಳು ಮಾಡಿದ್ದ ಆಕೆ ಮೊದಲು ಆತನ ಕುತ್ತಿಗೆ ಮುತ್ತಿಟ್ಟಳು. ಬಳಿಕ ಈಗ ಏನು ಮಾಡಲು ಬಯಸಿದ್ದೀಯ? ಎಂದು ಪ್ರಶ್ನಿಸಿ, ಆತನ ಬಟ್ಟೆಯ ಮೇಲೆ ಹೊಟ್ಟೆಯ ಭಾಗವನ್ನು ಸ್ಪರ್ಶಿಸಿದಳು. ಇದಾದ ಬಳಿಕ ಸೆಕ್ಸ್​ ಮಾಡಲು ಬಯಸುತ್ತೀಯ? ಎಂದು ಕ್ಯಾಂಡೈಸ್ ಬಾಲಕನನ್ನು ಕೇಳಿದ್ದಾಳೆ. ಆರಂಭದಲ್ಲಿ ನನಗೆ ಮನಸ್ಸಿಲ್ಲ ಎಂದ ಬಾಲಕ ನಂತರ ಹೌದು ಎಂದಿದ್ದಾನೆ ಎಂದು ಮಿಸ್​ ರೆಕಾರ್ಡರ್ ದೂರುದಾರನ ಪರ​ ನ್ಯಾಯಾಲಯದಲ್ಲಿ ವಿವರಿಸಿದ್ದರು.

    ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಬಾಲಕನೊಬ್ಬ ಕ್ಯಾಂಡೈಸ್​ಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳುಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಕ್ಯಾಂಡೈಸ್​, ಬಾಲಕನ ಐಫೋನ್​ಗೆ ಕಳುಹಿಸಿದ್ದ ಮಸೇಜ್​ ನೋಡಿದ್ದೇವೆ. ಅದರಲ್ಲಿ ನಿನಗೆ ನನ್ನ ದೇಹದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀಯ ಎಂದು ಬಾಲಕನನ್ನು ಕ್ಯಾಂಡೈಸ್​ ಕೇಳಿದ್ದಾಳೆಂದು ಇತರೆ ಸಾಕ್ಷಿಗಳು ವಿವರಣೆ ನೀಡಿದ್ದರು.

    ಬಳಿಕ ಕ್ಯಾಂಡೈಸ್​ ಪರ ವಕೀಲ ಮಧ್ಯಪ್ರವೇಶಿಸಿ ಆಕೆಯನ್ನು ಅಪರಾಧಿ ಎಂದು ಹೇಳಲು ಯಾವುದೇ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲ. ಸೆಕ್ಸ್​ ನಡೆಸಿದ ಸಮಯದಲ್ಲಿ ಮೈದಾನದ ಬಳಿ ಆಕೆಯ ಕಾರು ನಿಂತಿತ್ತು ಎಂದು ಸಾಬೀತು ಮಾಡಲು ಪಕ್ಕದಲ್ಲಿದ್ದ ಯಾವುದೇ ಸಿಸಿಟಿವಿಯಲ್ಲೂ ಆಕೆಯ ಕಾರಿನ ಚಲನೆ ದಾಖಲಾಗಿಲ್ಲ ಎಂದಿದ್ದರು. ಆದರೆ, ದೂರುದಾರನ ಪರ ವಕೀಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇವಲ ಸಿಸಿಟಿವಿ ಕ್ಯಾಮರಾ ಇಟ್ಟುಕೊಂಡು ಪ್ರಕರಣ ಅಂತ್ಯವನ್ನು ನಿರ್ಧರಿಸಲಾಗದು. ಏಕೆಂದರೆ ಆ ಸಮಯದಲ್ಲಿ ಸಿಸಿಟಿವಿ ಚಲನೆಯಲ್ಲಿ ಇರದೇ ಇರಬಹುದು ಅಥವಾ ಆಕೆಯೇ ಸಿಸಿಟಿವಿಯನ್ನು ತಪ್ಪಿಸಿರಬಹುದು ಎಂದಿದ್ದರು.

    ಇತರೆ ಅಪರಾಧ ಕುರಿತ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಧೀಶರಿಗೆ ಉತ್ತರ ನೀಡಲು ವಿಫಲವಾಗಿರುವ ಕ್ಯಾಂಡೈಸ್​, ಈ ವಿಚಾರದಲ್ಲೂ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದರು. ಈ ಹಿಂದೆ ತಾನು ಎಂದಿಗೂ ಪೊಲೀಸ್ ವಿಚಾರಣೆ ಎದುರಿಸಿಲ್ಲ ಎಂದು ಕ್ಯಾಂಡೈಸ್​ ಹೇಳಿಕೊಂಡಿದ್ದಳು. ಅಲ್ಲದೆ, 201 ರ ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಸಂಬಂಧ ಪ್ರಶ್ನಿಸಿದಾಗ ತನ್ನ ವಕೀಲರ ಸಲಹೆಯ ಮೇರೆಗೆ ‘ಯಾವುದೇ ಪ್ರತಿಕ್ರಿಯೆ ಇಲ್ಲ’ ಎಂದಿದ್ದಳು.

    ಇದನ್ನೂ ಓದಿರಿ: ಕರೊನಾ ಲಸಿಕಾ ಪ್ರಮಾಣಪತ್ರದಿಂದ ಪ್ರಧಾನಿ ಫೋಟೋ ತೆಗೆಯಿರಿ: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

    ಈಗಾಗಲೇ ಪ್ರಕರಣದಲ್ಲಿ ಸಾಕಷ್ಟು ಸುಳ್ಳುಗಳನ್ನು ಕ್ಯಾಂಡೈಸ್​ ಹೇಳಿರುವುದು ರುಜುವಾಗಿದೆ. ಕ್ಯಾಂಡೈಸ್​ ಪ್ರತಿ ವಿಚಾರಣೆಯಲ್ಲಿ ಏನು ಹೇಳಬೇಕೆಂದು ಮೊದಲೇ ತಯಾರಾಗಿ ಬಂದು ತನ್ನ ಮೇಲಿನ ಆರೋಪಗಳನ್ನು ಬಲವಾಗಿಯೇ ನಿರಾಕರಿಸುತ್ತಿದ್ದಾಳು. ಕೆಲವು ವಿಚಾರಗಳನ್ನು ಕೆದಕಿದಾಗಿ ಯಾವುದನ್ನು ಪ್ರತಿಕ್ರಿಯಿಸದೇ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳು.

    2018ರ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ ನಡುವೆ ಸ್ನ್ಯಾಪ್​ಚಾಟ್​ ಮೂಲಕ ತನ್ನ ಟಾಪ್​ಲೆಸ್​ ಫೋಟೋಗಳನ್ನು ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದ ಆರೋಪ ಮೇಲೆ ಕಳೆದ ಸೆಪ್ಟೆಂಬರ್​ನಲ್ಲಿ ಕ್ಯಾಂಡೈಸ್ ಶಿಕ್ಷೆಗೆ ಗುರಿಯಾಗಿದ್ದಳು. ಆದರೆ, ಶಿಕ್ಷಕಿಯೊಬ್ಬಳು ನಂಬಿಕೆಯ ಸ್ಥಾನದಲ್ಲಿರುವಾಗ ಮಗುವನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಲು ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಈ ಫೋಟೋ ಹಂಚಿಕೊಂಡ ಪ್ರಕರಣದಿಂದ ಆಕೆಯನ್ನು ಖುಲಾಸೆಗೊಳಿಸಲಾಗಿತ್ತು.

    ಆದರೆ, 16 ವರ್ಷದೊಳಗಿನ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸುವ ಮೂರು ಗಂಭೀರ ಆರೋಪಗಳ ಮೇಲೆ ತೀರ್ಪುಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕಳೆದ ಸೋಮವಾರ ಮಾತನಾಡಿರುವ ಪ್ರಾಸಿಕ್ಯೂಟರ್ ರಿಚರ್ಡ್ ಮಿಲ್ನೆ, 16 ವರ್ಷದೊಳಗಿನ ಮಗುವನ್ನು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಿರುವ ಕ್ಯಾಂಡೈಸ್​, ಮೂರು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದರು. ಆದರೆ, ಕೊನೆಗೂ ಆಕೆ ಶಿಕ್ಷೆಗೆ ಗುರಿಯಾಗಿದ್ದಾಳೆ.

    ಘಟನೆ ಹಿನ್ನೆಲೆ ಏನು?
    2018ರ ಸೆಪ್ಟೆಂಬರ್​ನಲ್ಲಿ ಕ್ರೀಡಾ ಪ್ರದರ್ಶನ ನೀಡುವಂತೆ ಬಾಲಕನನ್ನು ಕೇಳಿದ ಕ್ಯಾಂಡೈಸ್​, ವಿದ್ಯಾರ್ಥಿಯ ಫೋನ್​ ತೆಗೆದುಕೊಂಡು ಸ್ನ್ಯಾಪ್​ಚಾಟ್​ ಇನ್​ಸ್ಟಾಲ್​ ಮಾಡಿದ್ದಳು. ಇದನ್ನು ನೋಡಿದ್ದ ವಿದ್ಯಾರ್ಥಿ ಏನಿದು ವಿಚಿತ್ರ ಎಂದು ಭಾವಿಸಿದ್ದ. ಆರಂಭದಲ್ಲೇ ಸಾಮಾನ್ಯವಾಗಿಯೇ ಸಂದೇಶದ ಕಳುಹಿಸುತ್ತಿದ್ದ ಕ್ಯಾಂಡೈಸ್​, ವಾರ ಕಳೆದ ಬೆನ್ನಲ್ಲೇ ಕಾಮ ಪ್ರಚೋದನೆಯ ಸಂದೇಶ ಕಳುಹಿಸಲು ಆರಂಭಿಸಿದಳು. ಹೀಗೆ ಅನೇಕ ಬಾರಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಳೆ. ಈ ಮೂಲಕ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುವಾಗಲೂ ವಿದ್ಯಾರ್ಥಿ ಮುಜುಗರಕ್ಕೀಡು ಮಾಡಿದ್ದಾಳೆ. ಅದೇ ವರ್ಷ ಅಕ್ಟೋಬರ್​ನಲ್ಲಿ ಒಂದು ದಿನ ಶಾಲೆ ಮುಗಿದ ಬಳಿಕ ವಿದ್ಯಾರ್ಥಿಗೆ ಮಸೇಜ್​ ಮಾಡಿದ ಕ್ಯಾಂಡೈಸ್​, ಆತನನ್ನು ತನ್ನ ಕಾರಿನಲ್ಲಿ ಪಿಕ್​ ಮಾಡಿಕೊಂಡು ಖಾಸಗಿ ಏರಿಯಾಗೆ ತೆರಳಿ ಆತನೊಂದಿಗೆ ಸೆಕ್ಸ್​ ಮಾಡಿದ್ದಾಳೆ. ಇದಾದ ಬಳಿಕ ಇಬ್ಬರ ಸಂಬಂಧ ಹೀಗೆ ಮುಂದುವರಿದಿದೆ. ಇತ್ತ ಶಾಲೆಯಲ್ಲಿ ವದಂತಿಗಳು ಸಹ ಹರಿದಾಡಲಾರಂಭಿಸಿತ್ತು. 2020ರ ಜನವರಿಯಲ್ಲಿ ತನ್ನ ಸಂಬಂಧದ ಬಗ್ಗೆ ವಿದ್ಯಾರ್ಥಿ ಮುಖ್ಯ ಶಿಕ್ಷಕನಿಗೆ ಸುಳ್ಳು ಹೇಳಿದ್ದ. ಇದರ ನಡುವೆ ನಿನ್ನ ಮಗುವಿಗೆ ಗರ್ಭಿಣಿಯಾಗಬಹುದೆಂದು ಕ್ಯಾಂಡೈಸ್​ ವಿದ್ಯಾರ್ಥಿಗೆ ಹೇಳುವ ಮೂಲಕ ಶಾಕ್​ ನೀಡಿದ್ದಳು. ಇದಾದ ಬಳಿಕ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. (ಏಜೆನ್ಸೀಸ್​)

    ಇದನ್ನೂ ಓದಿರಿ: ಅನುಮಾನ ಬಂದು ಬಾತ್​​ರೂಮ್​ನಲ್ಲಿನ ಕನ್ನಡಿ ತೆಗೆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​..!

    15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

    15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts