More

    2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!

    ಜೈಪುರ: ಕೇವಲ ಎರಡನೇ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿದ್ದ ರಾಜಸ್ಥಾನ ಮೂಲದ ಯುವತಿ ಕೊನೆಗೂ ತಮಗಿಷ್ಟವಿಲ್ಲದ ಮದುವೆಯಿಂದ 18 ವರ್ಷಗಳ ಬಳಿಕ ಗುರುವಾರ ಮುಕ್ತರಾಗಿದ್ದಾರೆ. ಬಹಳ ಸಂತಸ ವ್ಯಕ್ತಪಡಿಸಿರುವ ಸಂತಸ್ತ ಯುವತಿ ಪೊಲೀಸ್​ ಅಧಿಕಾರಿಯಾಗಬೇಕೆಂಬ ಕನಸು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರಂತೆ.

    ಜೋಧ್​ಪುರ ಜಿಲ್ಲೆಯ ಬಾಪ್​ ತಾಲೂಕಿನ ನಿವಾಸಿಯಾಗಿರುವ ನಿಂಬು 2002ರಲ್ಲಿ ಎರಡನೇ ವಯಸ್ಸಿನಲ್ಲಿ ಬಿಕನೇರ್​ ಜಿಲ್ಲೆಗೆ ಬಾಲ್ಯ ವಿವಾಹ ಆಗಿದ್ದರಂತೆ. ಬಾಲ್ಯ ವಿವಾಹವು ನನ್ನನ್ನು ನಾಶ ಮಾಡಿತು. ಆದರೆ, ಕೃತಿ ದೀದಿ (ಕೃತಿ ಭಾರ್ತಿ, ಸಾರ್ಥಿ ಟ್ರಸ್ಟ್​ನ ಮ್ಯಾನೇಜಿಂಗ್​ ಟ್ರಸ್ಟಿ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞ) ಅವರು ನನಗೆ ಹೊಸ ಬಾಳು ನೀಡಿದರು. ಈಗ ನನ್ನ ಬಾಲ್ಯ ವಿವಾಹ ಕೊನೆಯಾಗಿದ್ದು, ಪೊಲೀಸ್​ ಅಧಿಕಾರಿಯಾಗುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನದ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿ: ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ನಿಂಬು ಅವರ ಬಾಲ್ಯ ವಿವಾಹವನ್ನು ಅಮಾನ್ಯ ಮಾಡಿ ಜೋಧ್​ಪುರದ ಕೌಟಂಬಿಕ ನ್ಯಾಯಾಲಯದ ಜಡ್ಜ್​ ಮಹೇಂದ್ರ ಕುಮಾರ್​ ಸಿನ್ಹಾಲ್​ ಗುರುವಾರ ಆದೇಶ ಹೊರಡಿಸಿದರು.

    2ನೇ ವಯಸ್ಸಲ್ಲೇ ಬಾಲ್ಯ ವಿವಾಹವಾಗಿದ್ದ ಯುವತಿಗೆ ಕೊನೆಗೂ ಸಿಕ್ತು ಮುಕ್ತಿ: ಕನಸು ನನಸು ಮಾಡಿಕೊಳ್ಳುವತ್ತ ಹೆಜ್ಜೆ!

    ಈ ಬಗ್ಗೆ ಮಾತನಾಡಿರುವ ಭಾರ್ತಿ, ನಿಂಬು ಮತ್ತು ಅವರ ಕುಟುಂಬ ಸಮಾಜದ ಒತ್ತಡಗಳಿಂದ ತುಂಬಾ ಒತ್ತಡಕ್ಕೆ ಒಳಗಾಗಿದ್ದರು. ಇದೀಗ ಒಳ್ಳೆಯ ಪ್ರಯತ್ನದಿಂದಾಗಿ ನಿಂಬು ಬಾಲ್ಯವಿವಾಹ ಅಂತ್ಯಗೊಂಡು ಉತ್ತಮ ಪುನರ್ವಸತಿ ಪಡೆದುಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಬಾಲ್ಯ ವಿವಾಹದಿಂದ ಮುಕ್ತಳಾಗಬೇಕೆಂದುಕೊಂಡಿದ್ದ ನಿಂಬುಗೆ ಸಮುದಾಯದ ನಾಯಕರು ಸಾಕಷ್ಟು ಒತ್ತಡ ಹೇರಿದ್ದರು. ನಿಂಬು ಕುಟುಂಬವನ್ನು ಸಮುದಾಯದಿಂದ ಬಹಿಷ್ಕಾರ ಹಾಕುವ ಬೆದರಿಕೆಯನ್ನು ಒಡ್ಡಿದ್ದರು. ತುಂಬಾ ಸಂಕಷ್ಟಕ್ಕೆ ಸಿಲುಕಿದ ನಿಂಬುಗೆ ಭಾರ್ತಿ ಆಫ್​ ಸಾರ್ಥಿ ಟ್ರಸ್ಟ್​ನ ಬಾಲ್ಯ ವಿವಾಹ ರದ್ದು ಅಭಿಯಾನ ನೆರವಿಗೆ ಬಂದಿತು. ನಮ್ಮನ್ನು ಸಂಪರ್ಕಿಸಿ ನಿಂಬು ಜೋಧ್​ಪುರದ ಕೌಟಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನಿಂಬು ಪರವಾಗಿ ಭಾರ್ತಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಕೊನೆಗೂ ನ್ಯಾಯ ಕೊಡಿಸಿದ್ದಾರೆ.

    ಇದನ್ನೂ ಓದಿ: ವಧು ಎಂದು ನಂಬಿಸಿ ಕೆಲಸದವಳನ್ನೇ ಮದುವೆ ಮಾಡಿಸಿದಳು! ಹೆಂಡತಿಗೆ ಗಿಫ್ಟ್​ ಕೊಟ್ಟಿದ್ದ ಮೊಬೈಲ್​ನಿಂದಲೇ ಬಯಲಾಯಿತು ಸತ್ಯ!

    ನ್ಯಾಯಲಯ ನೀಡಿರುವ ಮಹತ್ವದ ಆದೇಶವು ಬಾಲ್ಯ ವಿವಾಹಕ್ಕೆ ಒಂದು ಎಚ್ಚರಿಕೆ ಗಂಟೆಯಾಗಿದ್ದು, ಮುಂದಿನ ದಿನಗಳಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಬೀಳುವುದಕ್ಕೆ ಸಹಕಾರಿಯಾಗಿದೆ. (ಏಜೆನ್ಸೀಸ್​)

    ಸಾಹಸಸಿಂಹ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು: ಮಾಗಡಿ ರಸ್ತೆಯಲ್ಲಿ ಕೃತ್ಯ

    ಇಂಥಾ ಕಳ್ಳನನ್ನು ನೀವು ನೋಡಿರುವುದಕ್ಕೆ ಸಾಧ್ಯನೇ ಇಲ್ಲ: ಈತನ ಕತೆ ಕೇಳಿದ್ರೆ ನಿಮ್ಮ ಹುಬ್ಬೇರುವುದು ಗ್ಯಾರೆಂಟಿ!

    ರಾಜ್ಯಕ್ಕೆ ಖೋಟಾ ಕರೆನ್ಸಿ ಕಾಟ: ನಕಲಿ ನೋಟು ಹಾವಳಿ 4 ಪಟ್ಟು ಹೆಚ್ಚಳ, ಕರ್ನಾಟಕಕ್ಕೆ 2ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts