More

    ಸುಳ್ಳು ಹೇಳಿದರೆ ಹೀಗೆ ಆಗೋದು… ಪತಿಗೆ ಜೀವನಾಂಶ ನೀಡುವಂತೆ ಪತ್ನಿಗೆ ಕೋರ್ಟ್ ಆದೇಶ!

    ಇಂದೋರ್​: ಬೇರೆಯಾಗಿರುವ ಗಂಡನಿಗೆ ಜೀವನಾಂಶ ನೀಡುವಂತೆ ಪತ್ನಿಗೆ ನ್ಯಾಯಾಲಯ ಆದೇಶ ನೀಡಿರುವ ವಿರಾಳಾತಿ ವಿರಳ ಪ್ರಕರಣ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಗಂಡನ ವಿರುದ್ಧ ಪತ್ನಿ ನಕಲಿ ದೂರು ದಾಖಲಿಸಿದ್ದಕ್ಕೆ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

    ಇಂದೋರ್​ನ ಕೌಟುಂಬಿಕ ನ್ಯಾಯಾಲಯ ಇಂಥದ್ದೊಂದು ಆದೇಶವನ್ನು ಹೊರಡಿಸಿದೆ. ವರದಕ್ಷಿಣೆಗಾಗಿ ಪತಿ ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಳು. ತನ್ನ ಜೀವನಾಂಶಕ್ಕಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂಬ ಬೇಡಿಕೆಯನ್ನೂ ಆಕೆ ಇಟ್ಟಿದ್ದಳು.

    ಪತ್ನಿಯ ಬಳಿಕ ಗಂಡನು ಸಹ ಕೋರ್ಟ್​ ಮೆಟ್ಟಿಲೇರಿದ್ದಾರೆ. ಮದುವೆಯ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಯಿತು ಎಂದಿರುವ ಪತಿ, ಆಕೆಯನ್ನು ಮದುವೆಯಾಗಲು ತನ್ನ ವಿದ್ಯಾಭ್ಯಾಸವನ್ನು ಸಹ ಬಿಡಬೇಕಾಗಿ ಬಂದಿದ್ದರಿಂದ ನಾನಿಂದು ನಿರುದ್ಯೋಗಿಯಾಗಿದ್ದಾನೆ ಎಂದು ತನ್ನ ನೋವನ್ನು ತೋಡಿಕೊಂಡರು.

    ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ, ಮಹಿಳೆಯು ದಾಖಲಿಸಿದ ದೂರು ನಕಲಿ ಎಂದು ಗೊತ್ತಾದ ಬಳಿಕ ಮಹಿಳೆಗೆ ಶಿಕ್ಷೆ ವಿಧಿಸಿದೆ. ಯುವತಿಯ ಪತಿಗೆ ಮಾಸಿಕ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಪತಿಯ ಪರ ವಕೀಲರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಭುಗಿಲೆದ್ದ ಪೊಲೀಸರ ಆಕ್ರೋಶ: ಸರ್ಕಾರದ ವರ್ಗಾವಣೆ ಗ್ಯಾರಂಟಿ ನಂಬಿ ಸಿಬ್ಬಂದಿಗೆ ಭ್ರಮನಿರಸನ

    ಭಾರತದ ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಲಕ್ಷಾಧಿಪತಿ ಮಹಿಳೆಯರು! ಲಕ್ಷದ್ವೀಪದಲ್ಲಿ ಒಬ್ಬರೂ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts