More

    ಭಾರತದ ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಲಕ್ಷಾಧಿಪತಿ ಮಹಿಳೆಯರು! ಲಕ್ಷದ್ವೀಪದಲ್ಲಿ ಒಬ್ಬರೂ ಇಲ್ಲ

    ನವದೆಹಲಿ: ಮೂರು ವರ್ಷಗಳಲ್ಲಿ ದೇಶದಲ್ಲಿ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಸಂಕಲ್ಪ ಯಶಸ್ಸು ಸಾಧಿಸುವ ಲಕ್ಷಣಗಳು ಗೋಚರಿಸುತ್ತಿವೆ. ಏಕೆಂದರೆ, ಒಂದು ವರ್ಷದಲ್ಲಿ ಒಂದು ಕೋಟಿ ಮಹಿಳೆಯರು ಲಕ್ಷಾಧಿಪತಿಗಳಾಗಿದ್ದಾರೆ.

    ದೇಶಾದ್ಯಂತ ಸ್ವಸಹಾಯ ಗುಂಪುಗಳ ಸ್ವಾವಲಂಬನೆಯಿಂದಾಗಿ ಮಹಿಳಾ ಲಕ್ಷಾಧಿಪತಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸ್ವಸಹಾಯ ಸಂಘಗಳಲ್ಲಿ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಸಂಪಾದನೆ ಮಾಡುವ ಮಹಿಳೆಯರ ಸಂಖ್ಯೆ ಒಂದು ಕೋಟಿ ದಾಟಿದೆ.

    ವಾರ್ಷಿಕವಾಗಿ ಕನಿಷ್ಠ ಒಂದು ಲಕ್ಷ ರೂಪಾಯಿ ಗಳಿಸುವವರಲ್ಲಿ ಆಂಧ್ರಪ್ರದೇಶದ ಮಹಿಳೆಯರು ಅಗ್ರಸ್ಥಾನದಲ್ಲಿದ್ದಾರೆ. ಲಖಪತಿ ದೀದಿ ಯೋಜನೆಯ ಭಾಗವಾಗಿ ಆಂಧ್ರ ಪ್ರದೇಶದಲ್ಲಿ 13.65 ಲಕ್ಷ ಮಹಿಳೆಯರು ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಗಳಿಸಲು ಸಮರ್ಥರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಆಂಧ್ರ ಅಗ್ರಸ್ಥಾನದಲ್ಲಿದೆ, ಬಿಹಾರ ಎರಡನೇ ಸ್ಥಾನದಲ್ಲಿದೆ ಮತ್ತು ಪಶ್ಚಿಮ ಬಂಗಾಳ ಮೂರನೇ ಸ್ಥಾನದಲ್ಲಿದೆ.

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಖಪತಿ ದೀದಿ ಯೋಜನೆಯ ಅನುಷ್ಠಾನದಲ್ಲಿ ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಒಂದೇ ಒಂದು ಲಖಪತಿ ದೀದಿ ಇಲ್ಲ. ಅಂಡಮಾನ್ ಮತ್ತು ನಿಕೋಬಾರ್ 242 ಮತ್ತು ಗೋವಾ 206 ಲಖಪತಿ ದೀದಿಗಳೊಂದಿಗೆ ಕೊನೆಯ ಸ್ಥಾನದಲ್ಲಿವೆ.

    ಕಳೆದ ವರ್ಷ ಆಗಸ್ಟ್ 15 ರಂದು ಪ್ರಧಾನಿ ಮೋದಿ ಲಖಪತಿ ದೀದಿ ಯೋಜನೆಯನ್ನು ಘೋಷಿಸಿದರು. ದೇಶದಲ್ಲಿ 2 ಕೋಟಿ ಗ್ರಾಮೀಣ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ. ಮೂರು ವರ್ಷದಲ್ಲಿ ಮೂರು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನು ಮಾಡುವ ಗುರಿಯನ್ನು ಕೇಂದ್ರದ ಬಜೆಟ್ ಸಹ ಹೊಂದಿದೆ. ಒಂದು ವರ್ಷದೊಳಗೆ ಈ ಯೋಜನೆಯ ಭಾಗವಾಗಿ ಕೋಟ್ಯಂತರ ಮಹಿಳೆಯರು ಒಂದು ಲಕ್ಷ ರೂಪಾಯಿ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

    ಮಹಿಳೆಯರ ಸಬಲೀಕರಣದ ಭಾಗವಾಗಿ ಹತ್ತು ಕೋಟಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳ ಸದಸ್ಯರನ್ನಾಗಿ ಸೇರಿಸಲಾಗಿದ್ದು, ಈ ಮೂಲಕ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಲಾಗಿದೆ. (ಏಜೆನ್ಸೀಸ್​)

    ನಿಮ್ಮ ಫೋಟೋ ನನ್ನ ಆಟೋದಲ್ಲಿ ಏಕಿದೆ ಗೊತ್ತಾ? ಅನುಪಮಾ ವಿರುದ್ಧ ರೊಚ್ಚಿಗೆದ್ದ ಅಭಿಮಾನಿ!

    ಸರ್ಕಾರಿ ಶಾಲೆಗಳಿಗೆ ವಿದ್ಯುತ್ ನೀರಿನ ಬಿಲ್ ಪಾವತಿ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts