More

    ಅಪ್ರಾಪ್ತೆಯನ್ನು ಮದುವೆಯಾಗಿದ್ದಕ್ಕೆ ಕೇಸ್ : ಯುವಕನ ವಿರುದ್ಧ ಪೋಕ್ಸೋ ಪ್ರಕರಣ ರದ್ದು

    ಬೆಂಗಳೂರು: ಬಾಲಕಿಯನ್ನು ವಿವಾಹವಾಗಿ, ಮಗುವಿನ ಜನ್ಮಕ್ಕೆ ಕಾರಣನಾದ 20 ವರ್ಷದ ಯುವಕನ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ತಾಯಿ ಮತ್ತು ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿ ಈ ಆದೇಶ ಹೊರಡಿಸಿದೆ.

    ತಮ್ಮ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯ 9ರ ಅಡಿ ಹೊರಿಸಲಾದ ಆರೋಪ ರದ್ದುಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ ಅವರ ಏಕಸದಸ್ಯಪೀಠ ಪುರಸ್ಕರಿಸಿದೆ.

    ಕಾನೂನಿನ ಅರಿವಿಲ್ಲದೆ ಅನೀರಿಕ್ಷಿತವಾಗಿ ಮದುವೆ ನಡೆದಿದೆ. ಬಳಿಕ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿವಾಹಕ್ಕೆ ಕಾನೂನು ಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿ ವಿವಾಹ ನೋಂದಾಯಿಸಿಕೊಳ್ಳಲಾಗುವುದು ಎಂದು ನ್ಯಾಯಪೀಠದ ಮುಂದೆ ಬಾಲಕಿ ಹಾಗೂ ತಾಯಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿದ್ದನ್ನು ಪೀಠ ಪರಿಗಣಿಸಿದೆ. ಪೋಕ್ಸೊ ಕಾಯ್ದೆಯ ಉದ್ದೇಶವು ಅಪ್ರಾಪ್ತರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದಾಗಿದೆ. ಪರಿಣಾಮ ಅರಿಯದೆ ಪರಸ್ಪರ ಒಮ್ಮತದಿಂದ ಇಬ್ಬರು ಹರಿಹರೆಯದವರು ಲೈಂಗಿಕ ಸಂಪರ್ಕ ಹೊಂದುವುದು ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಪ್ರಕರಣವೇನು?: ಆಂಧ್ರ ಮೂಲದ 20 ವರ್ಷದ ಯುವಕ, 16 ವರ್ಷದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅಪ್ರಾಪ್ತೆಯನ್ನು ವರಿಸಿದ್ದಕ್ಕಾಗಿ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ರದ್ದುಗೊಳಿಸುವಂತೆ ಯುವಕ ಹೈಕೋರ್ಟ್ ಮೇಟ್ಟಿಲೇರಿದ್ದ.

    ಹುಡುಗಿ ಪಾಲಕರು ಆರ್ಥಿಕ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾರಾಗಿರುವುದನ್ನು ಗಮನಿಸಿದೆ ಹಾಗೂ ಅರ್ಜಿದಾರರು ನ್ಯಾಯಾಂಗ ಬಂದನದಲ್ಲಿದ್ದರೆ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗುವೂ ದುಃಖಮಯ ಬದುಕು ಸಾಗಿಸಬೇಕಾಗುತ್ತದೆ. ಇವುಗಳೆಲ್ಲವನ್ನು ಗಣನೆಗೆ ಪಡೆದುಕೊಂಡ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.

    ಅಷ್ಟೇ ಅಲ್ಲದೆ, ಪೋಕ್ಸೋ ಕಾಯ್ದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು. ಪರಿಣಾಮ ಅರಿಯದೆ ಪರಸ್ಪರ ಒಮ್ಮತದಿಂದ ಇಬ್ಬರು ಹರಿಹರೆಯದವರು ಲೈಂಗಿಕ ಸಂಪರ್ಕ ಹೊಂದವುದು ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts