More

    ‘ಬೇಗ ಸಾಯ್ಬೇಕಾ? ಹಾಗಾದರೆ ನೇಣು ಹಾಕ್ಕೋ!’ ವಿಡಿಯೋ ಕಾಲ್​ನಲ್ಲೇ ಪ್ರಿಯತಮೆಯನ್ನು ಕೊಂದ ಪ್ರೇಮಿ

    ಚೆನ್ನೈ: ಯೋಧನೊಬ್ಬನನ್ನು ಪ್ರೀತಿಸಿದ್ದ ತಪ್ಪಿಗೆ ಆತನೊಂದಿಗೆ ವಿಡಿಯೋ ಕಾಲ್​ನಲ್ಲಿ ಇದ್ದಾಗಲೇ ನೇಣು ಬಿಗಿಡುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆಕೆಯ ಪ್ರಿಯತಮನೇ ಯುವತಿಗೆ ಸಾಯುವುದಕ್ಕೆ ಹೇಳಿದ್ದಾನೆ ಎನ್ನುವುದು ಇದೀಗ ತಿಳಿದುಬಂದಿದೆ.

    ಇದನ್ನೂ ಓದಿ: ‘ಈ ಬಲ್ಬ್​ ನಿಮ್ಮ ಬದುಕನ್ನೇ ಬದಲಾಯಿಸುತ್ತೆ’ ಬಲ್ಬ್​ ಕೊಳ್ಳುವ ಮುನ್ನ ಎಚ್ಚರ!

    ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಭಾರತಿ(26) ವಿಡಿಯೋ ಕಾಲಿಂಗ್ ಆ್ಯಪ್​ ಒಂದರಲ್ಲಿ ಕುಮಾರ್​ಸೇನ್​ನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ನಾಗ್ಪುರ ಮೂಲದ ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತನೊಂದಿಗಿದ್ದ ಸ್ನೇಹ ಕೆಲವೇ ದಿನದಲ್ಲಿ ಪ್ರೀತಿಯಾಗಿ ಬದಲಾಗಿದೆ. ನವೆಂಬರ್​ 18ರಂದು ಕುಮಾರ್​ಸೇನ್​ ನಾಗ್ಪುರದಿಂದ ಚೆನ್ನೈಗೆ ಭಾರತಿಯನ್ನು ನೋಡಲೆಂದು ಬಂದಿದ್ದ. ಆ ಸಮಯದಲ್ಲಿ ಯುವತಿಗೆ ಅಘಾತವಾಗಿದೆ.

    ಕುಮಾರ್​ಸೇನ್​ಗೆ ಈ ಹಿಂದೆಯೇ ಒಂದು ಮದುವೆಯಾಗಿತ್ತು. ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಆದರೆ ಭಾರತಿಯೊಂದಿಗೆ ಹುಚ್ಚು ಪ್ರೀತಿಯಲ್ಲಿದ್ದ ಆತ ಆಕೆಯನ್ನು ಎರಡನೇ ಮದುವೆಯಾಗಲು ಬಯಸಿದ್ದ. ಈ ವಿಚಾರ ಭಾರತಿಗೆ ನವೆಂಬರ್​ 18ಕ್ಕೆ ಗೊತ್ತಾಗಿದೆ. ಮದುವೆಯಾಗಿರುವ ನಿನ್ನೊಂದಿಗೆ ಪ್ರೀತಿ ಸಾಧ್ಯವಿಲ್ಲ ಎಂದ ಆಕೆ ಪ್ರೀತಿಯನ್ನು ಮುರಿಯಲು ಮುಂದಾಗಿದ್ದಾಳೆ. ಆದರೆ ಅದಕ್ಕೆ ಕುಮಾರ್​ಸೇನ್​ ಒಪ್ಪಿಲ್ಲ. ನೀನು ನನ್ನ ಮದುವೆಯಾಗಲೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

    ಇದನ್ನೂ ಓದಿ: ನಾಳೆ ಅಂಗಡಿಗಳು ತೆರೆಯುತ್ತಾ? ಏನೆನ್ನುತ್ತೆ ವ್ಯಾಪಾರಿಗಳ ಒಕ್ಕೂಟ?

    ಕುಮಾರ್​ಸೇನ್​ನ ಈ ನಡವಳಿಕೆಯಿಂದ ಬೇಸತ್ತಿದ್ದ ಭಾರತಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಮಾಡಿದ್ದಾಳೆ. ಡಿಸೆಂಬರ್​ 2ರಂದು ಕುಮಾರ್​ಸೇನ್​ನೊಂದಿಗೆ ವಿಡಿಯೋ ಕಾಲ್​ನಲ್ಲಿರುವಾಗ ತನ್ನ ಕೈ ಕೊಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಅದಾಗದಿದ್ದಾಗ, ನೇಣು ಹಾಕಿಕೋ, ಬೇಗ ಸಾಯುತ್ತೀಯ ಎಂದು ಕುಮಾರ್​ಸೇನ್​ ಸಲಹೆ ಕೊಟ್ಟಿದ್ದಾನೆ. ಅದರಂತೆ ಭಾರತಿ ವಿಡಿಯೋ ಕಾಲ್​ನಲ್ಲಿರುವುಗಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಮೃತರ ಫೋನ್​ ಕಾಲ್​ ಪರಿಶೀಲನೆ ನಡೆಸಿದಾಗ ನಡೆದ ವಿಚಾರಗಳು ಹೊರಬಿದ್ದಿದೆ. ಕುಮಾರ್​ಸೇನ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts