More

    ರಸ್ತೆ ಹಂಪ ಗಳಿಗೆ ಮಾರ್ಕಿಂಗ್ ವ್ಯವಸ್ಥೆ

    ರಟ್ಟಿಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅವೈಜ್ಞಾನಿಕ ಹಂಪ್​ಗಳಿಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಬುಧವಾರ ತಾತ್ಕಾಲಿಕವಾಗಿ ಮಾರ್ಕಿಂಗ್ ವ್ಯವಸ್ಥೆ ಮಾಡಲಾಯಿತು.

    ಅವೈಜ್ಞಾನಿಕ ಹಂಪ್ಸ್ ನಿರ್ವಣದಿಂದ ಸರಣಿ ಅಪಘಾತ ನಡೆದ ಕುರಿತು ಹಾಗೂ ನಿತ್ಯ ಚಾಲಕರು, ಪ್ರಯಾಣಿಕರು ಪಡುತ್ತಿರುವ ತೊಂದರೆ ಕುರಿತು ‘ಹಂಪ್ಸ್ ಬದಲಿಸಿ, ಅಪಾಯ ತಪ್ಪಿಸಿ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತುರ್ತು ಕ್ರಮಕ್ಕೆ ಮುಂದಾಗಿದ್ದಾರೆ.

    ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಹುಬ್ಬಳಿಯ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಕೆ. ಮಠದ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ವಿುಸಲಾಗಿರುವ ಹಂಪ್​ಗಳಿಗೆ ತಾತ್ಕಾಲಿಕವಾಗಿ ಬಿಳಿ ಬಣ್ಣದ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 4-5 ದಿನಗಳಲ್ಲಿ ಹಂಪ್ಸ್ ಇರುವಿಕೆ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನು ಮತ್ತು ವಾಹನ ಚಾಲಕರಿಗೆ ಅಪಾಯವಾಗದಂತೆ ಹಂಪ್​ಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts