More

    ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 523, ನಿಫ್ಟಿ 160 ಅಂಕ ಕುಸಿತದೊಂದಿಗೆ ಬುಧವಾರದ ವಹಿವಾಟು ಅಂತ್ಯ

    ನವದೆಹಲಿ: ಬುಧವಾರದ ವಹಿವಾಟಿನ ದಿನದ ಕೊನೆಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತದೊಂದಿಗೆ ಮುಕ್ತಾಯವಾದವು. ಬಿಎಸ್ಇ ಸೆನ್ಸೆಕ್ಸ್ 523 ಪಾಯಿಂಟ್ಸ್ ಕುಸಿದು 64,049 ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 160 ಪಾಯಿಂಟ್ಸ್ ಕುಸಿತದೊಂದಿಗೆ 19,122ಕ್ಕೆ ತಲುಪಿತು. ಈ ಮೂಲಕ ಮಾರುಕಟ್ಟೆಯು ಸತತ ಐದನೇ ದಿನವೂ ಕುಸಿತ ಕಂಡಿದೆ.

    ಹೆಚ್ಚು ದೇಶೀಯ ಕೇಂದ್ರಿತವಾಗಿರುವ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಚಂಚಲತೆ ಹೆಚ್ಚಾದಂತೆ ಮಾರಾಟದ ಒತ್ತಡ ಅನುಭವಿಸಿದವು. ಸೂಚ್ಯಂಕಗಳು ಅನುಕ್ರಮವಾಗಿ 63,912 ಮತ್ತು 19,074 ಪಾಯಿಂಟ್​ಗಳೊಂದಿಗೆ ಇಂಟ್ರಾಡೇ ಕನಿಷ್ಠ ಮಟ್ಟವನ್ನು ತಲುಪಿದವು. S&P BSE ಸೆನ್ಸೆಕ್ಸ್ ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ 3 ಪ್ರತಿಶತವನ್ನು ಕಳೆದುಕೊಂಡಿದೆ ಮತ್ತು 2023ರ ಸೆಪ್ಟೆಂಬರ್ 15 ರಂದು ಅದರ 52 ವಾರಗಳ ಗರಿಷ್ಠ ಮಟ್ಟವಾದ 67927.23 ರಿಂದ ಸುಮಾರು 6 ಪ್ರತಿಶತದಷ್ಟು ಕಡಿಮೆಯಾಗಿದೆ.

    ಒಂದೆಡೆ ಇಸ್ರೇಲ್​-ಹಮಾಸ್​ ನಡುವಿನ ನಿರಂತರ ಯುದ್ಧದ ಆತಂಕ ಮತ್ತು ಅಮೆರಿಕದ ಬಾಂಡ್​ ಇಳುವರಿಯಲ್ಲಿನ ಏರಿಳಿತಗಳು ಹೂಡಿಕೆದಾರರನ್ನು ಆತಂಕಕ್ಕೆ ದೂಡಿರುವ ಪರಿಣಾಮ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬಂದಿದೆ.

    ಸಿಪ್ಲಾ, ಅಪೋಲೋ ಹಾಸ್ಪಿಟಲ್ಸ್​, ಎನ್​ಟಿಪಿಸಿ, ಅದಾನಿ ಎಂಟರ್ಪ್ರೈಸಸ್​, ಎಸ್​ಬಿಐ ಲೈಫ್​, ದಿವಿಸ್​ ಲ್ಯಾಬ್ಸ್​, ಟೆಕ್​ ಎಂ, ಭಾರತೀ ಏರಟೆಲ್​, ಐಸಿಐಸಿಐ ಬ್ಯಾಂಕ್​, ಎಚ್​ಡಿಎಫ್​ಸಿ ಲೈಫ್​, ಟಾಟಾ ಮೋಟರ್ಸ್​, ಇನ್ಫೋಸಿಸ್​, ಇಂಡಸ್​​ ಬ್ಯಾಂಕ್​, ಈಜರ್​ ಮೋಟರ್ಸ್​, ಎಲ್​ ಆ್ಯಂಡ್​ ಟಿ, ಬಜಾಜ್​ ಫೈನಾನ್ಸ್​, ಗ್ರಾಸಿಮ್​ ಮತ್ತು ಬಜಾಜ್​ ಆಟೋ ದಿನದ ಬಹಿವಾಟಿನಲ್ಲಿ ತಲಾ ಶೇ. 1 ರಷ್ಟು ಕುಸಿತ ಕಂಡಿವೆ. ವಿಶಾಲ ಮಾರುಕಟ್ಟೆಯಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.52 ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಶೇ. 0.77 ರಷ್ಟು ಮುಂಚೂಣಿ ಸೂಚ್ಯಂಕಗಳ ಶೇ. 0.8 ರಷ್ಟು ಕುಸಿತಕ್ಕೆ ವಿರುದ್ಧವಾಗಿ ಕುಸಿದಿve.

    ಎಲ್ಲ ವಯಯಗಳ ಪೈಕಿ ನಿಫ್ಟಿ ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಮಾತ್ರ ಲಾಭ ಗಳಿಸಿದವು. ಶೇ. 0.1ರಷ್ಟು ಏರಿಕೆ ಕಂಡವು. ದಿ ನಿಫ್ಟಿ ರಿಯಾಲಿಟಿ, ಐಟಿ ಆ್ಯಂಡ್​ ಮೀಡಿಯಾ ಸೂಚ್ಯಂಕಗಳು ತಲಾ ಶೇ. 1 ರಷ್ಟು ಕುಸಿತ ಕಂಡಿವೆ. (ಏಜೆನ್ಸೀಸ್​)

    31ಕ್ಕೆ ಸರ್ಕಾರಿ ಪಡಿತರ ವಿತರಕರ ತುರ್ತು ಸಭೆ:ಹೋರಾಟದ ಬಗ್ಗೆ ನಿರ್ಣಯ

    ಸೇನಾ ನೇಮಕಾತಿ ನೆಪದಲ್ಲಿ ವಂಚನೆ; ಸೇವೆಯಿಂದ ಓಡಿ ಹೋಗಿದ್ದ ಮಾಜಿ ನೌಕರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts