More

    31ಕ್ಕೆ ಸರ್ಕಾರಿ ಪಡಿತರ ವಿತರಕರ ತುರ್ತು ಸಭೆ:ಹೋರಾಟದ ಬಗ್ಗೆ ನಿರ್ಣಯ

    ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆ ನಿಲ್ಲಿಸುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಮುಂದೆ ಹಮ್ಮಿಕೊಳ್ಳುವ ಹೋರಾಟದ ರೂಪುರೇಷಗಳನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ,ಮಂಗಳವಾರ (ಅ.31) ಖಾಸಗಿ ಹೋಟೆಲ್‌ನಲ್ಲಿ ತುರ್ತು ಸಭೆ ಆಯೋಜಿಸಿದೆ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಕಡ್ಡಾಯವಾಗಿ ಈ ಸಭೆಯಲ್ಲಿ ಭಾಗಿಯಾಗುವಂತೆ ಸಂಘ ಮನವಿ ಮಾಡಿದೆ.

    ಐದೂವರೆ ತಿಂಗಳು ಕಳೆದರೂ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಸರ್ಕಾರ ವಿಲವಾಗಿದೆ. ಇತ್ತೀಚಿಗಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಬಿಟಿ ಮುಖೇನ ಹಣ ನೀಡುವ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಸರ್ಕಾರ ಹೇಳಿದೆ. ಇದರಿಂದಾಗಿ ನಮಗೆ ಸಿಗಬೇಕಿದ್ದ ಕಮಿಷನ್ ಹಣವೂ ಖೋತವಾಗಿದೆ. ಆಹಾರ ಧಾನ್ಯ ಪಡೆದ ನಂತರ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಆದೇಶಿಸಿದೆ. ಕಾರ್ಡ್‌ದಾರರಿಗೆ ಪಡಿತರ ವಿತರಣೆ ನೀಡಲಾಗುವ ಕಮಿಷನ್ ಹಣವನ್ನು ಹೆಚ್ಚಿಸಿಲ್ಲ. ಬಾಕಿ ಇರುವ ಇಕೆವೈಸಿ ಹಣವೂ ಬಿಡುಗಡೆಯಾಗಿಲ್ಲ. ಹೀಗಾಗಿ, ದಿನದಿಂದ ದಿನಕ್ಕೆ ಯೋಜನೆ ಸಂಬಂಧ ಸರ್ಕಾರ ಮನಬಂದಂತೆ ಆದೇಶ ಹೊರಡಿಸುತ್ತಿದೆ. ಇದರಿಂದಾಗಿ ಮಾಲೀಕರು ತೊಂದರೆಯಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:ಭೂಗತ ಪಾತಕಿ ರವಿ ಪೂಜಾರಿ ಸಹಚರ ಮೊಹಮ್ಮದ್ ಹನೀಫ್ ಬಂಧನ

    ಆಹಾರ ಸಚಿವರು ಒಮ್ಮೆ ನಮ್ಮ ಜತೆ ಸಭೆ ನಡೆಸಿ ತಿಂಗಳೊಳಗೆ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಮಗೆ ಭರವಸೆ ನೀಡಿದ್ದರು. ಆಹಾರ ಇಲಾಖೆ ಅಧಿಕಾರಿಗಳು ಸಹ ನಾಲ್ಕೈದು ಬಾರಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಇದುವರೆಗೆ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ. ಹೀಗಾಗಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲು ನಾವೆಲ್ಲರೂ ಸಿದ್ಧರಾಗಬೇಕಿದೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts