More

    ಸೇನಾ ನೇಮಕಾತಿ ನೆಪದಲ್ಲಿ ವಂಚನೆ; ಸೇವೆಯಿಂದ ಓಡಿ ಹೋಗಿದ್ದ ಮಾಜಿ ನೌಕರ ಸೆರೆ

    ಬೆಂಗಳೂರು: ಭಾರತೀಯ ಸೇನೆಯಲ್ಲಿ ನೌಕರಿ ಕೊಡಿಸುವುದಾಗಿ 150 ಯುವಕರಿಗೆ ವಂಚಿಸಿದ್ದ ಇಬ್ಬರನ್ನು ಮಿಲಿಟರಿ ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಹುಬ್ಬಳ್ಳಿಯ ಶಿವರಾಜ್ ವಟಗಲ್ (40) ಮತ್ತು ಭೀಮವ್ವ ಬಂಧಿತರು. ದಾವಣಗೆರೆಯ ಪ್ರಕಾಶ್ ಮತ್ತು ಇತರರು ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿ ಬೆಂಗಳೂರಿನ ಮಿಲಿಟರಿ ಗುಪ್ತಚರ ಅಧಿಕಾರಿಗಳು ಮತ್ತು ಶ್ರೀರಾಂಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಭಾರತೀಯ ಸೇನೆಗೆ ಸೇರಿಕೊಂಡಿದ್ದ ಹುಬ್ಬಳ್ಳಿಯ ಶಿವರಾಜ್ ವಟಗಲ್, ಅಲ್ಲಿಂದ ಓಡಿ ಹೋಗಿದ್ದ. ಆನಂತರ ತನ್ನ ಸಹಚರರ ಜತೆಗೆ ಸೇರಿಕೊಂಡು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕೆಲಸ ಕೊಡಿಸುವುದಾಗಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 150 ಯುವಕರಿಗೆ ಆಮಿಷವೊಡ್ಡಿದ್ದ. ಉದ್ಯೋಗ ಆಕಾಂಕ್ಷಿಗಳಿಂದ ಅರ್ಜಿ ಶುಲ್ಕ, ಇನ್ನಿತ್ತರ ನೆಪದಲ್ಲಿ 1 ಕೋಟಿ ರೂ. ಸುಲಿಗೆ ಮಾಡಿ ವಂಚನೆ ಮಾಡಿದ್ದ.

    ಈ ಬಗ್ಗೆ ನೊಂದ ಯುವಕರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಕಲಿ ಗುರುತಿನ ಚೀಟಿ, ಸೇನಾ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts