More

    ಕೊತ್ತಂಬರಿ ಸೊಪ್ಪಿನ ಜತೆ ಗಾಂಜಾ ಬೆಳೆದಿದ್ದ ಭೂಪ! ಹನೂರಿನಲ್ಲಿ ಮಹಿಳೆಯೊಬ್ಬರ ಜಮೀನು ಗುತ್ತಿಗೆ ಪಡೆದು ಕೃತ್ಯ

    ಚಾಮರಾಜನಗರ: ಗಾಂಜಾ ಗಿಡಗಳನ್ನು ಬೆಳೆಯುವಂತಿಲ್ಲ, ಗಾಂಜಾ ಸೊಪ್ಪು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ನಮ್ಮ ದೇಶದಲ್ಲಿದೆ. ಆದರೂ ಹಲವೆಡೆ ಅಕ್ರಮ ದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಇಲ್ಲೊಬ್ಬ ಖತರ್ನಾಕ್​ ವಂಚಕ, ತರಕಾರಿ ಬೆಳೆಯುವುದಾಗಿ ಮಹಿಳೆಯೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಯಾರಿಗೂ ಅನುಮಾನ ಬಾರದಿರಲೆಂದು ಕೊತ್ತಂಬರಿ ಸೊಪ್ಪಿನ ಜತೆ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ.

    ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ(40) ಬಂಧಿತ ಆರೋಪಿ. ಈತ ಸರೋಜಮ್ಮ ಎಂಬುವವರ ಜಮೀನನ್ನು ಗುತ್ತಿಗೆ ಪಡೆದು ಕೊತ್ತಂಬರಿ ಸೊಪ್ಪು ಬೆಳೆದಿದ್ದ.

    ಜಮೀನಿನ ಮಧ್ಯಭಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರಾದ ಸುನೀಲ್ ಹಾಗೂ ಸಿಬ್ಬಂದಿ ಬುಧವಾರ ದಾಳಿ ನಡೆಸಿದಾಗ ಗಾಂಜಾ ಗಿಡಗಳು ಪತ್ತೆಯಾಗಿವೆ. ಜಮೀನಿನಲ್ಲಿ ಬೆಳೆದಿದ್ದ 348 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ. ಎನ್​ಡಿಪಿಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಸಿಬ್ಬಂದಿ ಸಿದ್ದರಾಜು, ರಮೇಶ್ ಎಂ. ಹಾಗೂ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.

    ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್​ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಪತ್ನಿಯ ಕಿರುಕುಳ: ಮದ್ವೆಯಾದ ಮೂರೇ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts