ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್​ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ

ಕೊಳ್ಳೇಗಾಲ: ವೃದ್ಧೆಯೊಬ್ಬರು ಮಂಚದ ಮೇಲೆ ಮಲಗಿಕೊಂಡೇ ಉಪವಿಭಾಗಾಧಿಕಾರಿ ಕೋರ್ಟ್​ಗೆ ಹಾಜರಾದ ಘಟನೆ ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ಸಂಭವಿಸಿದೆ. ಚಾಮರಾಜನಗರ ಪಟ್ಟಣದ ನಿವಾಸಿ ಮುಮ್ತಾಜ್ ಬೇಗಂ(75) ಮಂಚದ ಮೇಲೆ ಮಲಗಿಕೊಂಡೇ ಕೋರ್ಟ್​ಗೆ ಹಾಜರಾಗಿದ್ದವರು. ಹೆತ್ತ ಮಗನೇ ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡು ಮುಮ್ತಾಜ್ ಬೇಗಂ ಅವರನ್ನು ಮನೆಯಿಂದ ಹೊರಹಾಕಿದ್ದ. ನೊಂದ ತಾಯಿ, ತನ್ನ ಕೊನೆಯ ಮಗ ಸಿ.ಎನ್.ಅಬ್ದುಲ್ ರಜಾಕ್ (ಸಿದ್ದಿಕ್) ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-2007 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. … Continue reading ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್​ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ