More

    ಅಪಾಯಕಾರಿಯಾಗಿದೆ ಪಾಚಿ: ಮರವಂತೆ ಬೀಚ್‌ನಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ಸಂದೇಶ

    ಗಂಗೊಳ್ಳಿ: ಮಳೆ ಇಳಿಮುಖಗೊಂಂಡು ಕಡಲ ಅಬ್ಬರ ಕಡಿಮೆಯಾಗುತ್ತಿರುವಂತೆಯೇ ವಿಶ್ವಖ್ಯಾತಿಯ ಮರವಂತೆ ಬೀಚ್ ಮತ್ತೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ಬೀಚ್ ಆಕರ್ಷಣೆಯ ಕೇಂದ್ರ ಬಿಂದು. ಆದರೆ ಬೀಚ್‌ನಲ್ಲಿ ನಿರ್ಮಿಸಿರುವ ಟಿ-ಸೇಫ್ ಮಾದರಿಯ ಸೀವಾಕ್ ಸದ್ಯ ಪ್ರವಾಸಿಗರಿಗೆ ಅಪಾಯಕಾರಿಯಾಗುತ್ತಿದೆ.

    ಟೀ-ಸೇಫ್ ಮಾದರಿಯ ಸೀವಾಕ್‌ನ ಬಂಡೆಕಲ್ಲುಗಳಲ್ಲಿ, ಟೆಟ್ರಾಪೋಡ್‌ಗಳಲ್ಲಿ ದಟ್ಟ ಪಾಚಿ ಕಟ್ಟಿದ್ದು ಅಲೆ ಮತ್ತು ಕಡಲ ಸೌಂದರ್ಯ ಸವಿಯಲು ಇಲ್ಲಿ ಹೆಜ್ಜೆ ಇರಿಸುವ ಪ್ರವಾಸಿಗರು ಜಾರಿ ಬೀಳುವ ಸಾಧ್ಯತೆಯಿರುವುದರಿಂದ ಎಚ್ಚರ ವಹಿಸುವಂತೆ ಪೊಲೀಸ್ ಮತ್ತು ತಾಲೂಕು ಆಡಳಿತ ಹೇಳಿದೆ.

    ಮೈಮರೆತರೆ ಅಪಾಯ: ತ್ರಾಸಿ- ಮರವಂತೆ ಬೀಚ್‌ನಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಟಿ-ಸೇಫ್ ತಡೆಗೋಡೆ ಮರವಂತೆ ಬೀಚ್‌ನ ಸೌಂದರ್ಯ ಇಮ್ಮಡಿಗೊಳಿಸಿದೆ. ಆದರೆ ಈ ತಡೆಗೋಡೆಯ ಕಲ್ಲುಗಳಿಗೆ ಅಲೆಯ ಹೊಡೆತದಿಂದ ಹಸಿರು ಪಾಚಿ ಆವರಿಸಿಕೊಂಡಿವೆ. 600 ಮೀಟರ್ ಉದ್ದಕ್ಕೂ ತಡೆಗೋಡೆಯ ಬಂಡೆಗಳಲ್ಲಿ ದಪ್ಪ ಪಾಚಿ ಕುಳಿತಿದೆ. ಕಡಲ ಸೌಂದರ್ಯ ವೀಕ್ಷಿಸಲೆಂದು ಬರುವ ಮಂದಿ ತಡೆಗೋಡೆ ಬಂಡೆಯ ಮೇಲೆ ಹೆಜ್ಜೆಯಿರಿಸಿ ಮೈಮರೆತರೆ ಕಡಲಿಗೆ ಆಹಾರವಾಗುವ ಆತಂಕ ಮನೆ ಮಾಡಿದೆ.

    ಎಚ್ಚರಿಕೆ ಸಂದೇಶ: ತ್ರಾಸಿ- ಮರವಂತೆ ಬೀಚ್‌ನುದ್ದಕ್ಕೂ ಪೊಲೀಸ್ ಇಲಾಖೆ ಎಚ್ಚರಿಕೆಯ ನಾಮಫಲಕ ಅಳವಡಿಸಿದೆ. ಸಂದೇಶ ಪಾಲಿಸಿಕೊಂಡು ಕಡಲ ಸೌಂದರ್ಯ ಸವಿಯುವಂತೆ ಮನವಿ ಮಾಡಿದೆ.

    ತ್ರಾಸಿ-ಮರವಂತೆ ಕಡಲ ತೀರದಲ್ಲಿ ರಾಷ್ಟ್ರೀಯ ಹೆದಾರಿ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಮರವಂತೆಯಲ್ಲಿ ನಿರ್ಮಿಸಲಾದ ಸಮುದ್ರದ ತಡೆಗೋಡೆ ಮೇಲೆ ಪ್ರವಾಸಿಗರು ನಿಲ್ಲುತ್ತಿದ್ದು, ಇದು ಬಹಳಷ್ಟು ಅಪಾಯಕಾರಿಯಾಗಿದೆ. ಈ ಬಗ್ಗೆ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಹಾಗೂ ನಾಮಫಲಕ ಅಳವಡಿಸುವ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದು, ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.
    ವಿನಯ್, ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ

    ತಡೆಗೋಡೆಯ ಕಲ್ಲುಗಳು ಅಲೆಯ ಹೊಡೆತಕ್ಕೆ ಸಿಲುಕಿ ಹಸಿರು ಪಾಚಿ ಆವರಿಸಿಕೊಂಡಿದೆ. ಕಡಲ ಸೌಂದರ್ಯ ವೀಕ್ಷಿಸಲೆಂದು ಬರುವ ದೂರದೂರಿನ ಪ್ರವಾಸಿಗರಿಗೆ ಪಾಚಿಯ ಬಗ್ಗೆ ಅರಿವಿರುವುದಿಲ್ಲ. ತಡೆಗೋಡೆ ಬಂಡೆಯ ಮೇಲೆ ಹೆಜ್ಜೆಯಿರಿಸಿ ಮೈಮರೆತರೆ ಕಡಲಿಗೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಭದ್ರತಾ ಕ್ರಮಕೈಗೊಳ್ಳಬೇಕು.
    ರಾಜೀವ, ಸ್ಥಳೀಯ ನಿವಾಸಿ, ತ್ರಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts