More

    ಮರಾಠ ಮೀಸಲಾತಿ ಕಿಚ್ಚು; ಭರವಸೆ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಮನೋಜ್​ ಜಾರಂಗೆ

    ಮುಂಬೈ: ಮರಾಠ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕರೆ ನೀಡಲಾಗಿದ್ದ ಹೋರಾಟ ಹಾಗೂ ಉಪವಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮನೋಜ್​ ಜಾರಂಗೆ ತಿಳಿಸಿದ್ದಾರೆ.

    ಏಕನಾಥ್​ ಶಿಂಧೆ ಸಂಪುಟದ ನಾಲ್ವರು ಸಚಿವರು ಮನೋಜ್​ ಜಾರಂಗೆ ಅವರನ್ನು ಸರ್ಕಾರದ ವತಿಯಿಂದ ಭೇಟಿ ಮಾಡಿ ಭರವಸೆ ನೀಡಿದ ಬಳಿಕ ಉಪವಾಸ ಸತ್ಯಾಗ್ರಹವನ್ನು ಹಾಗೂ ಕರೆ ನೀಡಲಾಗಿದ್ದ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

    ನಾವು ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಮರಾಠವಾಡದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಆದರೆ, ಆದರೆ ನಾವು ಎಲ್ಲಾ ಮರಾಠರಿಗಾಗಿ ಹೋರಾಡುತ್ತಿದ್ದೇವೆ. 40 ವರ್ಷಗಳಿಂದ ಹೋರಾಟ ಮಾಡಿ ಕಾದಿದ್ದೇವೆ. ಸರ್ಕಾರ ನಮಗೆ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವ ಮಾತಿಲ್ಲ.

    Manoj Jarange

    ಇದನ್ನೂ ಓದಿ: ಲಾರಿ-ಬೈಕ್​ ಡಿಕ್ಕಿ; ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವು

    ಸರ್ಕಾರ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಕನಿಷ್ಠ ಎಂದರು ಎರಡು ತಿಂಗಳ ಸಮಯ ಬೇಕು ಅಲ್ಲಿಯವರೆಗೂ ಕಾದು ನೋಡುತ್ತೇವೆ. ಒಂದು ವೇಳೆ ಸರ್ಕಾರ ಕೊಟ್ಟಿರುವ ಮಾತನ್ನು ಉಳಿಸಕೊಳ್ಳದಿದ್ದರೆ ನಾವು ನಮ್ಮ ಹೋರಾಟವನ್ನು ಪ್ರಾರಂಭಿಸುತ್ತೇವೆ. ಆದರೆ, ಮುಂದಿನ ಬಾರಿ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತೇವೆ. ಅಗತ್ಯ ವಸ್ತುಗಳ ಪೂರೈಕೆಯನ್ನು ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಶಿಕ್ಷಣ, ಮೀಸಲಾತಿಯಲ್ಲಿ ಮರಾಠಿಗರಿಗೆ ಶೇ. 40ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತೆ ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಮನೋಜ್​ ಜಾರಂಗೆ ಪಾಟೀಲ್​ ಅಮರಣಾಂತ ಉಪವಾಸ ಸತ್ಯಾಗ್ರಹ ಕೂರುವ ಮೂಲಕ ಪ್ರತಿಭಟನೆಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts