More

    ಬಿಎಸ್​ವೈ ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ ಈಗ ಅವರ ಆಶ್ರಯ ಬೇಕಾಯ್ತೆ: ರಾಜ್ಯ ಕಾಂಗ್ರೆಸ್​ ಪ್ರಶ್ನೆ

    ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲು ಬಿಜೆಪಿಗೆ ನಾಯಕರಿಲ್ಲದೆ “ಪದಚ್ಯುತ ನಾಯಕ” ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ಕೂರಿಸಿದೆ ಎಂದು ರಾಜ್ಯ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್​ ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬೇಡವಾಗಿದ್ದ BSY ಈಗ ಪತ್ರಿಕಾಗೋಷ್ಠಿ ನಡೆಸಲು ಬೇಕಾದರೆ ಎಂದು ಟೀಕಿಸಿದೆ.

    ನಮ್ಮ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲು ಬಿಜೆಪಿಗೆ ನಾಯಕರಿಲ್ಲದೆ “ಪದಚ್ಯುತ ನಾಯಕ” ಬಿ.ಎಸ್. ಯಡಿಯೂರಪ್ಪ ಅವರನ್ನು ಕರೆಸಿ ಕೂರಿಸಿದೆ. ಇದೇ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಕೆಲವೇ ದಿನಗಳ ಹಿಂದೆ ಕರೆಸಿ ಅವಮಾನಿಸಿತ್ತು, ನಿರ್ಗಮಿತ ನಾಯಕನಿಗೆ ನಯಾಪೈಸೆ ಬೆಲೆ ಕೊಡದ ಬಿಜೆಪಿ ಈಗ ಹಳೆ ಮಾಲೀಕನ ಪಾದವೇ ಗತಿ ಎನ್ನುವಂತೆ ಯಡಿಯೂರಪ್ಪನವರ ಮೊರೆ ಹೋಗಿದೆ ಎಂದು ವ್ಯಂಗ್ಯವಾಡಿದೆ.

    ಇದನ್ನೂ ಓದಿ: ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ; ನೈತಿಕ ಸಮಿತಿ ಸಭೆಯಿಂದ ಅರ್ಧದಲ್ಲೇ ಹೊರನಡೆದ ಸಂಸದೆ ಮಹುವಾ ಮೊಯಿತ್ರಾ

    ಸರ್ಕಾರದ ವಿರುದ್ಧ ಯಡಿಯೂರಪ್ಪನವರ ಕೈಯ್ಯಲ್ಲಿ ಪತ್ರಿಕಾಗೋಷ್ಠಿ ಮಾಡಿಸಿದ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಗತಿ ಇಲ್ಲದೆ ಹೋಗಿದ್ದು ಶೋಚನೀಯ. ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬೇಡವಾಗಿದ್ದ BSY ಈಗ ಪತ್ರಿಕಾಗೋಷ್ಠಿ ನಡೆಸಲು ಬೇಕಾದರೆ. ಬಿಎಸ್​ವೈ ಕಣ್ಣೀರಿಗೆ ಬೆಲೆ ಕೊಡದ ಬಿಜೆಪಿಗೆ ಈಗ ಅವರ ಆಶ್ರಯ ಬೇಕಾಯ್ತೆ. ಈ ಆಶ್ರಯ ಕೇವಲ ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವೇ. ಹೈಕಮಾಂಡ್ ನಾಯಕರು BSYರನ್ನು ಅವಮಾನಿಸಿದಾಗ ತುಟಿ ಬಿಚ್ಚದ ಬಿಜೆಪಿ ಈಗ ಸರ್ಕಾರದ ವಿರುದ್ಧ ಮಾತನಾಡಿಸಲು ಮಾತ್ರ ಅಗತ್ಯ ಬಿದ್ದರೆ ಎಂದು ಪ್ರಶ್ನಿಸಿದೆ.

    ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಿರಿ, ನಂತರ ಮೂಲೆಗುಂಪು ಮಾಡಿದ್ದೀರಿ. ಯಡಿಯೂರಪ್ಪನವರಿಗೆ ಟಿಕೆಟ್ ಕೂಡ ನೀಡದೆ ವಂಚಿಸಿದ್ದೀರಿ. ಈಗ ಬಿಎಸ್​ವೈ ಅವರು ಶಾಸಕರಲ್ಲ, ವಿಪಕ್ಷ ನಾಯಕನಾಗುವ ಅವಕಾಶವಿಲ್ಲ, ಸದನದ ಕಲಾಪಕ್ಕೆ ಬಾಗವಹಿಸುವಂತೆಯೂ ಇಲ್ಲ. ಅವರ ಎಲ್ಲಾ ಅವಕಾಶವನ್ನು, ನಾಯಕತ್ವವನ್ನು ಕಿತ್ತುಕೊಂಡು ಸರ್ಕಾರದ ವಿರುದ್ಧ ಮಾತನಾಡಲು ಮಾತ್ರ ಬಳಸಿಕೊಳ್ಳುತ್ತಿರುವುದು ಹಲ್ಲಿಲ್ಲದ ಹಾವು ಬುಸುಗುಡುವಂತೆಯೇ ಸರಿ ಎಂದು ರಾಜ್ಯ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts