More

    ದತ್ತಪೀಠದ ದಾರಿಯಲ್ಲಿ ಮೊಳೆಗಳು; ಭಕ್ತರ ವಾಹನಗಳನ್ನು ಪಂಕ್ಚರ್ ಆಗಿಸುವ ಉದ್ದೇಶ?

    ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ಭಕ್ತರು ತೆರಳುವ ದಾರಿಯಲ್ಲಿ ಯಾರೋ ಕಿಡಿಗೇಡಿಗಳು ಮೊಳೆಗಳನ್ನು ಹಾಕಿರುವುದು ಕಂಡುಬಂದಿದೆ. ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳುವ ವಾಹನಗಳನ್ನು ಪಂಕ್ಚರ್​ಗೊಳಿಸುವ ಉದ್ದೇಶದಿಂದ ಈ ಮೊಳೆಗಳನ್ನು ಹಾಕಲಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

    ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳುವ ವಾಹನಗಳನ್ನು ಪಂಕ್ಚರ್​​ಗೊಳಿಸುವ ಉದ್ದೇಶದಿಂದ ಕಿಡಿಗೇಡಿಗಳು ದಾರಿಯಲ್ಲಿ ಮೊಳೆಗಳನ್ನು ಹಾಕಿದ್ದಾರೆ. ಹೀಗೆ ರಸ್ತೆಯಲ್ಲಿ ಕಂಡುಬಂದಿರುವ ಮೊಳೆಗಳನ್ನು ಕಾರ್ಯಕರ್ತರು ತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪ ಮಾಡಿದ್ದಾರೆ.

    ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದ ದತ್ತಜಯಂತಿಗೆ ಚಾಲನೆ ನೀಡಲಾಗಿದ್ದು, ಇಂದಿನಿಂದ ಮೂರು ದಿನ ಕಾರ್ಯಕ್ರಮ ನಡೆಯಲಿದೆ. ನಗರದ ಬೋಳರಾಮೇಶ್ವರ ದೇವಸ್ಥಾನದಲ್ಲಿ ಮಹಿಳೆಯರ ಸಂಕೀರ್ತನ ಯಾತ್ರೆಯೊಂದಿಗೆ ಉದ್ಘಾಟಿಸಲಾಗಿದೆ. ಒಂದೇ ಬಣ್ಣದ ಸೀರೆಯಲ್ಲಿ ಭಾಗಿಯಾದ ಸಾವಿರಾರು ಮಹಿಳೆಯರು ನಗರದ ಐಜಿ ರಸ್ತೆ, ರತ್ನಗಿರಿ ರಸ್ತೆಯಲ್ಲಿ ಸಂಕೀರ್ತನಾ ಯಾತ್ರೆ ತೆರಳಿ, ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದತ್ತಜಯಂತಿಯ ಮೊದಲ ದಿನ ಅನಸೂಯ ಜಯಂತಿ ಅಚರಣೆ ಆಗಲಿದೆ.

    ದತ್ತಪೀಠದ ದಾರಿಯಲ್ಲಿ ಮೊಳೆಗಳು; ಭಕ್ತರ ವಾಹನಗಳನ್ನು ಪಂಕ್ಚರ್ ಆಗಿಸುವ ಉದ್ದೇಶ?

    ಶಾಲೆಯಲ್ಲಿ ಪ್ರಾರ್ಥನೆ ವೇಳೆ ಕುಸಿದು ಬಿದ್ದ ಶಿಕ್ಷಕ; ಹೃದಯಾಘಾತದಿಂದ ಸಾವು..

    ನಾಲ್ಕು ತಿಂಗಳಿನಿಂದ ಸ್ನಾನವನ್ನೇ ಮಾಡದ ಯುವತಿ; ಫ್ಲ್ಯಾಟ್​ನಿಂದಲೇ ಹೊರಹಾಕಿದ ರೂಮ್​ಮೇಟ್​

    ಒಂದೇ ಜಿಲ್ಲೆಯ 15 ಪುರುಷರ ಸಂತಾನಶಕ್ತಿ ಹರಣ; ಸ್ವಯಂಪ್ರೇರಿತರಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗಮನಸೆಳೆದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts