More

    ಒಗ್ಗಟ್ಟಿನಿಂದ ಸುಂದರ ಸಮಾಜ ನಿರ್ಮಾಣ; ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ

    ಮಾನ್ವಿ: ಜಾತಿ, ಧರ್ಮಗಳ ಭೇದ ಮೀರಿ ನಾವೆಲ್ಲರೂ ಒಂದಾಗಿ ಸಾಗಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಕಲ್ಮಠ ಗುರುಭವನದಲ್ಲಿ ಗುರುವಾರ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 47 ನೇ ವರ್ಷದ ಶ್ರೀದೇವಿ ಪುರಾಣದ ಮಹಾಮಂಗಲೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು. ಬದುಕಿನಲ್ಲಿ ಸುಖ-ದುಃಖ, ಹುಟ್ಟು-ಸಾವುಗಳನ್ನು ನಾವು ಸಮಾನವಾಗಿ ಸ್ವೀಕರಿಸಿದಾಗ ಜೀವನ ಸುಗಮವಾಗಿ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

    ಎಲ್ಲ ಧರ್ಮಗಳ ಸಾರವನ್ನು ತಿಳಿದುಕೊಂಡಾಗ ಜಾತಿ ವೈಷಮ್ಯಗಳನ್ನು ಮೀರಿ ಬಾಳಲು ಸಾಧ್ಯವಾಗುತ್ತದೆ ಎನ್ನುವ ದೃಷ್ಟಿಯಿಂದ ಮಠದ ಹಿರಿಯ ಸ್ವಾಮೀಜಿಗಳು 47 ವರ್ಷಗಳಿಂದ ಸರ್ವಧರ್ಮ ಸಮ್ಮೇಳನ ಆಯೋಜಿಸುತ್ತಿದ್ದು, ಈ ಮೂಲಕ ಪಟ್ಟಣದಲ್ಲಿ ಸಾಮರಸ್ಯ ಮೂಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

    ಲೊಯೋಲಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಫಾದರ್ ಜಾನ್ ಕ್ರಾಸ್ತಾ ಮಾತನಾಡಿ, ನಮ್ಮ ಸಂವಿಧಾನದಲ್ಲಿ ದೇಶದ ಏಕತೆ, ಸಮಗ್ರತೆ ಮತ್ತು ಸಮಾನತೆಗಾಗಿ ಎಲ್ಲ ಸಮುದಾಯಗಳಿಗೆ ಸಮಾನವಾದ ಹಕ್ಕುಗಳನ್ನು ನೀಡಲಾಗಿದ್ದು, ಪರಸ್ಪರ ಸೌಹಾರ್ದದಿಂದ ಬಾಳುವ ಅವಶ್ಯವಿದೆ ಎಂದು ತಿಳಿಸಿದರು.

    ಮುಸ್ಲಿಂ ಧರ್ಮ ಗುರು ಸೈಯದ್ ಸಜ್ಜಾದ್ ಹುಸೇನಿ ಮತವಾಲೆ ಮಾತನಾಡಿ, ದೇಶದ ಏಕತೆಗಾಗಿ ನಾವೆಲ್ಲರೂ ಶ್ರಮಿಸೋಣ. ಸಮಾಜದಲ್ಲಿ ಐಕ್ಯತೆ ಮೂಡಿಸಲು ಕಲ್ಮಠದಿಂದ ಉತ್ತಮ ಕಾರ್ಯವಾಗುತ್ತಿದೆ ಎಂದು ತಿಳಿಸಿದರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಗಂಗಾಧರ ನಾಯಕ, ನಯೋಪ್ರ ಅಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಶಂಕರಯ್ಯಸ್ವಾಮಿ ಸುವರ್ಣಗಿರಿ ಮಠ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಾಸ ಮಾಲಿ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ, ಮಠದ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts