More

    ಅ.2ರವರೆಗೆ ಕಾಲುವೆಗೆ ನೀರು, ನೀರಾವರಿ ಇಲಾಖೆ ಎಇಇ ಶರಣಪ್ಪ ನಾಯಕ ಭರವಸೆ

    ಮಾನ್ವಿ: ಕೆಳಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆಗೆ ಮುಂದಾಗಿದ್ದ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು, ನೀರಮಾನ್ವಿ ಗ್ರಾಮದ ರೇಣುಕಾ ಯಲಮ್ಮದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ಅಧ್ಯಕ್ಷತೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿದರು.

    ನೀರಾವರಿ ಇಲಾಖೆ ಎಇಇ ಶರಣಪ್ಪ ನಾಯಕ ಮಾತನಾಡಿ, ತುಂಗಭದ್ರ ಎಡದಂಡೆ 89ನೇ ಉಪಕಾಲುವೆಗೆ ಸೆ.29ರಿಂದ ಅ.2ರವರೆಗೆ ವಾರಬಂದಿಯಂತೆ ನೀರು ಬಿಡುವುದಾಗಿ ರೈತರಿಗೆ ಭರವಸೆ ನೀಡಿದರು.

    ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ಮಾತನಾಡಿ, ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ 4.2 ಅಡಿ ನೀರು ಕಾಯ್ದುಕೊಳ್ಳಬೇಕು. ಅಕ್ರಮವಾಗಿ ನೀರು ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೈತರು ಪ್ರತಿಭಟನೆ ಹಿಂಪಡೆದು ಶಾಂತಿ ಕಾಪಡಬೇಕು ಎಂದು ತಿಳಿಸಿದರು.

    ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಪ್ರತಿಬಾರಿ ನೀರಾವರಿ ಇಲಾಖೆಯವರು ಭತ್ತ ಕಾಳುಕಟ್ಟುವ ಹಂತದಲ್ಲಿ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗದೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts