More

    ಪೌಷ್ಟಿಕ ಆಹಾರ ಯೋಜನೆ ಸದ್ಬಳಕೆ ಮಾಡಿಕೊಳ್ಳಿ ; ನ್ಯಾಯಾಧೀಶೆ ದೀಪಾ ಗೋಪಾಲ ಮರ್ನೇಕರ್ ಸಲಹೆ

    ಮಾನ್ವಿ: ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಆರೋಗ್ಯದಿಂದ ಇರಲು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದೀಪಾ ಗೋಪಾಲ ಮರ್ನೇಕರ್ ತಿಳಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಅಪೌಷ್ಟಿಕದಿಂದ ಬಳಲುತ್ತಿರುವವರ ಆರೋಗ್ಯಕ್ಕಾಗಿ ಸರ್ಕಾರ ರೂಪಿಸಿರುವ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ದೌರ್ಜನ್ಯ, ವಂಚನೆ ಹಾಗೂ ಇತರ ವಿಷಯಗಳಿಂದ ಅನ್ಯಾಯಕ್ಕೊಳಗಾದವರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವಾ ಸೌಲಭ್ಯ ನೀಡಲಾಗುತ್ತಿದೆ ಎಂದರು.

    ಸಿವಿಲ್ ನ್ಯಾಯಾಧೀಶ ಆಶಪ್ಪ ಬಿ.ಸಣ್ಣಮನಿ ಮಾತನಾಡಿ, ಆಪೌಷ್ಟಿಕ ಹೋಗಲಾಡಿಸಿ ಆರೋಗ್ಯಯುತ ಜೀವನ ನಡೆಸುವಂತೆ ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಎನ್.ಚೇತನಕುಮಾರ, ತಾಪಂ ಇಒ ಅಣ್ಣಾರಾವ್, ಸಿಡಿಪಿಒ ಸುಭದ್ರಾದೇವಿ, ಬಿಇಒ ಚಂದ್ರಶೇಖರ ದೊಡ್ಡಮನಿ, ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ್, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಾಟೀಲ್, ಎಸಿಡಿಪಿಒ ಮಹೇಶ, ಯುನಿಸೆಫ್ ಯೋಜನಾಧಿಕಾರಿ ಅರುಣಾದೇವಿ, ವಕೀಲರಾದ ಎ.ಬಿ.ಉಪ್ಪಳಮಠ, ಗುಮ್ಮಾ ಬಸವರಾಜ, ಎಂ.ವೀರನಗೌಡ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts