More

    ನಾಗರಹಾವಿಗೆ ಚಿಕಿತ್ಸೆ ನೀಡಿದ ಪಶುವೈದ್ಯ

    ಮಾನ್ವಿ: ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜು ಕಂಬಳೆ, ಗಾಯಗೊಂಡಿದ್ದ ನಾಗರಹಾವಿಗೆ ಅರವಳಿಕೆ ಮದ್ದು ನೀಡಿ ಚರ್ಮಕ್ಕೆ ಹೊಲಿಗೆ ಹಾಕಿರಕ್ಷಿಸಿದ್ದಾರೆ.

    ಪಟ್ಟಣದ ಕರಡಿಗುಡ್ಡ ರಸ್ತೆ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಿಲುಕಿ ಗಾಯಗೊಂಡಿದ್ದ ಹಾವನ್ನು ಹಾವುಗಳ ಸಂರಕ್ಷಕ ರಮೇಶ ಮಂಗಳವಾರ ಪಶುಚಿಕಿತ್ಸಾಲಯಕ್ಕೆ ತಂದಿದ್ದರು. ಈ ಕುರಿತು ಮಾತನಾಡಿದ ಪಶುವೈದ್ಯ ರಾಜು ಕಂಬಳೆ, ವಿಷಪೂರಿತ ಹಾವಿಗೆ ಚಿಕಿತ್ಸೆ ನೀಡಿರುವುದು ಇದೇ ಮೊದಲು. ಉರಗ ರಕ್ಷಕ ರಮೇಶ, ಗಾಯಗೊಂಡಿದ್ದ ನಾಗರಹಾವಿನ ತಲೆಯನ್ನು ನಳಿಕೆಯಲ್ಲಿ ಸೇರಿಸುವ ಮೂಲಕ ಚಿಕಿತ್ಸೆ ವೇಳೆ ಹಾವು ಆಸ್ಪತ್ರೆಯ ಸಿಬ್ಬಂದಿಗೆ ಕಚ್ಚದಂತೆ ಜಾಗ್ರತೆ ವಹಿಸಿದ್ದರು. ಹಾವಿನ ತಲೆ ಹತ್ತಿರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೊಲಿಗೆ ಹಾಕಲಾಗಿದೆ. ಹಾವು ಪ್ರಾಣಾಪಾಯದಿಂದ ಪಾರಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts