More

    ಚಿರತೆ ಮರಿ ಸೆರೆ ಹಿಡಿದ ಗ್ರಾಮಸ್ಥರು

    ಮಾನ್ವಿ: ಹಲವು ದಿನಗಳಿಂದ ಜನರನ್ನು ಭಯ ಭೀತಗೊಳಿಸಿದ್ದ ಚಿರತೆ ಮರಿಗಳನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಭಾನುವಾರ ಯಶಸ್ವಿಯಾಗಿದ್ದು, ಎರಡು ಚಿರತೆ ಮರಿಗಳಲ್ಲಿ ಒಂದು ಮರಿಯನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ನಂತರದಲ್ಲಿ ನೀರಮಾನ್ವಿ ಗುಡ್ಡದಲ್ಲಿ ಮತ್ತಷ್ಟು ಚಿರತೆಗಳು ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ನೀರಮಾನ್ವಿ, ಬೆಟ್ಟದೂರು ಗ್ರಾಮಗಳ ಹೊರವಲಯದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದವು.

    ಗುಡ್ಡದ ಸಮೀಪ ಕುರಿಗಾಯಿಗಳು ಕುರಿ ಮೇಯಿಸುತ್ತಿರುವಾಗ ಚಿರತೆ ಮರಿಗಳು ಕಂಡುಬಂದಿದ್ದು, ಕುರಿಗಾಯಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗಿಡದ ಮರೆಯಲ್ಲಿ ಮರಿಗಳು ಕುಳಿತಿದ್ದನ್ನು ಕಂಡು ಗ್ರಾಮಸ್ಥರು ಹಿಡಿಯಲು ಬಲೆ ಹಾಕಿದ್ದು, ಒಂದು ಮರಿ ತಪ್ಪಿಸಿಕೊಂಡರೆ, ಮತ್ತೊಂದು ಬಲೆಗೆ ಬಿದ್ದಿದೆ.

    ಸೆರೆ ಸಿಕ್ಕ ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿ ರಾಜೇಶ ನಾಯಕಗೆ ಒಪ್ಪಿಸಲಾಗಿದ್ದು, ಮರಿಯನ್ನು ಕಮಲಾಪುರದ ದರೋಜಿ ಅರಣ್ಯಕ್ಕೆ ಕಳುಹಿಸಲಾಗಿದೆ. ಗುಡ್ಡದಲ್ಲಿ ಮತ್ತೊಂದು ಚಿರತೆ ಇರುವ ಆತಂಕ ಜನರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts