More

    ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಜೆಪಿ ಕೊಡುಗೆ ಎಂದು ಆರೋಪಿಸಿದ ಮಾಜಿ ಶಾಸಕ ಎನ್.ಎಸ್. ಬೋಸ್‌ರಾಜು

    ಮಾನ್ವಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ತೈಲ, ಗ್ಯಾಸ್ ಸಿಲಿಂಡರ್ ಮತ್ತು ಆಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಾಜಿ ಶಾಸಕ ಎನ್.ಎಸ್. ಬೋಸ್‌ರಾಜು ತಿಳಿಸಿದರು.

    ಪಟ್ಟಣದ ಕೋನಾಪುರಪೇಟೆ ಜಡೆ ಬಸಪ್ಪ ದೇವಸ್ಥಾನದಿಂದ ಬ್ಲಾಕ್ ಕಾಂಗ್ರೆಸ್ ಬುಧವಾರ ಹಮ್ಮಿಕೊಂಡಿದ್ದ ಸೈಕಲ್ ರ‌್ಯಾಲಿಯಲ್ಲಿ ಮಾತನಾಡಿದರು. ದಿನದಿಂದ ದಿನಕ್ಕೆ ಬೆಲೆ ಏರಿಕೆ ಸಾಮಾನ್ಯವಾಗಿದೆ. ಪೆಟ್ರೋಲ್ 100 ರೂ. ಡಿಸೆಲ್ 95 ರೂ. ದಾಟಿದರೂ ಬೆಲೆ ಏರಿಕೆ ನಿಲ್ಲುತ್ತಿಲ್ಲ ಎಂದರು.

    ದೇಶದಲ್ಲಿ ಕರೊನಾದಿಂದ ರೈತರು, ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಗೊಬ್ಬರ ಬೆಲೆ ಹೆಚ್ಚಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಆಗತ್ಯ ವಸ್ತುಗಳ ಬೆಲೆ ಇಷ್ಟೊಂದು ತುಟ್ಟಿ ಆಗಿರಲಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುವುದೇ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.

    ಮಾಜಿ ಶಾಸಕ ಹಂಪಯ್ಯನಾಯಕ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ರೈತರ ವಿರೋಧಿ ಸರ್ಕಾರವಾಗಿದೆ. ಪ್ರಧಾನಿ ಮೋದಿಯವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ಯೋಜನೆಗಳು ರೂಪಿಸಿಲ್ಲ ಎಂದು ಆರೋಪಿಸಿದರು.

    ಜಿಲ್ಲಾ ಕಾಂಗ್ರೆಸ್ ವೀಕ್ಷಕ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಪೂರ್‌ಸಾಬ್, ಮುಖಂಡರಾದ ದೊಡ್ಡ ಬಸಪ್ಪಗೌಡ, ಬಿ.ಕೆ. ಅಮರೇಶಪ್ಪ, ಬಾಲಸ್ವಾಮಿ ಕೊಡ್ಲಿ, ಶರಣಯ್ಯನಾಯಕ ಗುಡದಿನ್ನಿ, ರಾಜಾ ವಸಂತನಾಯಕ, ವೀರಭದ್ರಗೌಡ ಬೋಗಾವತಿ, ಮಹಾಂತೇಶ ಸ್ವಾಮಿ, ಚಂದ್ರಶೇಖರ ಕುರ್ಡಿ, ಚನ್ನಬಸವ ಬೆಟ್ಟದೂರು, ಜಿ.ನಾಗರಾಜ, ನರಸಿಂಹ ನಾಯಕ, ಎಸ್.ಎಂ. ಪಾಟೀಲ್, ಗೋಪಿ ಅಮರೇಶಕ್ಯಾಂಪ್, ಚಂದ್ರಶೇಖರ ಓತೂರು, ಜಯಪ್ರಕಾಶ, ಶಶಿಕಲಾ ಭೀಮರಾಯ್, ಅಮೃತ, ಈರಮ್ಮ, ಗುಂಡಮ್ಮ ವಕೀಲರು, ಗೋಪಿಕಾ ಶ್ರೀನಿವಾಸ್ ಸೇರಿದಂತೆ ಪಕ್ಷದ ಪುರಸಭೆ ಸದಸ್ಯರು, ಇತರ ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts