More

  VIDEO| ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಂಧ್ರ ಸಿಎಂಗೆ ಟಿಡಿಪಿ ಮಾಜಿ ಶಾಸಕನಿಂದ ಮನವಿ

  ಬೆಂಗಳೂರು: ಒಂದೆಡೆ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದರೆ, ಮತ್ತೊಂದೆಡೆ ಪುಣ್ಯ ಕ್ಷೇತ್ರವೊಂದು ರಾಜ್ಯಕ್ಕೆ ಸೇರ್ಪಡೆಯಾಗಲಿದೆಯಾ ಎಂಬ ಪ್ರಶ್ನೆಯೊಂದು ಮೂಡಿದೆ.

  ಹೌದು, ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ಎಂಬ ಒತ್ತಾಯವು ಆಂಧ್ರ ಪ್ರದೇಶದಲ್ಲಿ ಕೇಳಿಬರುತ್ತಿದೆ. ಟಿಡಿಪಿ(ತೆಲುಗು ದೇಶಂ ಪಕ್ಷ)ಯ ಮಾಜಿ ಶಾಸಕ ತಿಕ್ಕಾರೆಡ್ಡಿ ಅವರು ಈ ಒತ್ತಾಯವನ್ನು ಸಿಎಂ ಜಗನ್​ಮೋಹನ್​ ರೆಡ್ಡಿ ನೇತೃತ್ವ ಸರ್ಕಾರದ ಮುಂದಿಟ್ಟಿದ್ದಾರೆ.

  ನಮ್ಮ ಆಚರಣೆ, ಸಂಸ್ಕೃತಿ ಎಲ್ಲವೂ ಕೂಡ ಕನ್ನಡದಲ್ಲಿಯೇ ಇವೆ. ಹೀಗಾಗಿ ನಮ್ಮ ಕರ್ನೂಲ್​ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿ, ವಿಶಾಖಪಟ್ಟಣಂಗೆ ಸೇರಿಸಬೇಡಿ. ಹಾಗೊಮ್ಮೆ ಸೇರಿಸಿದರೆ ತುಂಬಾ ಕಷ್ಟವಾಗುತ್ತದೆ ಎಂದು ಆಗ್ರಹಿಸಿದ್ದಾರೆ.

  ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ. ಹೀಗಾಗಿ ಈ ಭೌಗೋಳಿಕ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸೋದೆ ನ್ಯಾಯವೆಂದು ಸಿಎಂ ಜಗನ್​ಮೋಹನ್​ ರೆಡ್ಡಿಗೆ ತಿಕ್ಕಾ ರೆಡ್ಡಿ ಅವರು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts