More

    ರಾಯರ ಭಕ್ತರಿಗೆ ನಿರಾಸೆ: ಮಂತ್ರಾಲಯದ ಬಾಗಿಲು ಸದ್ಯಕ್ಕೆ ತೆರೆಯಲ್ಲ ಎಂದ ಆಡಳಿತ ಮಂಡಳಿ

    ರಾಯಚೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಬಾಗಿಲನ್ನು ಜುಲೈ 2ರಿಂದ ಸಾರ್ವಜನಿಕರಿಗಾಗಿ ತೆರೆಯಲಾಗುತ್ತಿದೆ ಎಂದು ಕಳೆದ ವಾರವಷ್ಟೇ ಆಡಳಿತ ಮಂಡಳಿ ತಿಳಿಸಿತ್ತು.

    ಆದರೆ ಕರೊನಾ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ರಾಯರ ಮಠವನ್ನು ತೆರೆಯುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

    ಜೂನ್ ಒಂದರಿಂದ ಷರತ್ತಿನೊಂದಿಗೆ ದೇವಸ್ಥಾನ ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ ಮಠ ತೆರೆದಿರಲಿಲ್ಲ. ನಂತರ ಜುಲೈ 2ರಿಂದ ತೆರೆಯುವುದಾಗಿ ತಿಳಿಸಿತ್ತು. ಆದರೆ ಇದೀಗ ಪುನಃ ದಿನಾಂಕವನ್ನು ಮುಂದೂಡಿದೆ. ಈ ಕುರಿತು ಮಂತ್ರಾಲಯ ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕ ವೆಂಕಟೇಶ್ ಜೋಷಿ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮಠವನ್ನು ತೆರೆಯುವ ದಿನಾಂಕವನ್ನು ತಿಳಿಸಲಾಗಿಲ್ಲ.

    65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ, ಗರ್ಭಿಣಿಯರಿಗೆ ಹಾಗೂ ವಯೋಸಹಸ ಸಂಬಂಧಿಸಿದಂತೆ ಕಾಯಿಲೆ ಇದ್ದವರಿಗೆ ಪ್ರವೇಶವಿಲ್ಲ, ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆಧಾರ ಸಂಖ್ಯೆ ನೀಡಬೇಕು, ಮೊಬೈಲ್‌ ಸಂಖ್ಯೆ ನೀಡುವುದೂ ಕಡ್ಡಾಯ, ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ 6ರವರೆಗೂ ದರ್ಶನಕ್ಕೆ ಅವಕಾಶ, ಬೇರೆಡೆಯಿಂದ ಬರುವ ಭಕ್ತರಿಗೆ ಮಠದ ವಸತಿ ನಿಲಯದಲ್ಲಿ ಒಂದು ಕೋಣೆಯಲ್ಲಿ ಇಬ್ಬರು ಒಂದು ದಿನ ಮಾತ್ರ ತಂಗಲು ಅವಕಾಶ ಕಲ್ಪಿಸಲಾಗುತ್ತದೆ ಎಂಬಿತ್ಯಾದಿ ಷರತ್ತುಗಳೊಂದಿಗೆ ಜುಲೈ 2ರಿಂದ ದೇವಾಲಯದ ಬಾಗಿಲು ತೆರೆಯುವುದಾಗಿ ತಿಳಿಸಲಾಗಿತ್ತು.

    ‘ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ..’ ಧ್ವನಿ ಬಿಟ್ಟು ಮರೆಯಾದ ಉಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts