More

    ‘ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ..’ ಧ್ವನಿ ಬಿಟ್ಟು ಮರೆಯಾದ ಉಷಾ

    ಬೆಂಗಳೂರು: ನೀವು ಕರೆ ಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…

    ಈ ಮಾತನ್ನು ನಾವೆಲ್ಲರೂ ಪ್ರತಿದಿನವೂ ಅದೆಷ್ಟು ಸಲ ಕೇಳಿರುತ್ತೇವೋ ಲೆಕ್ಕಕ್ಕಿಲ್ಲ. ಲ್ಯಾಂಡ್‌ಲೈನ್‌ನಿಂದ ಹಿಡಿದು ಮೊಬೈಲ್‌ ಯುಗದವರೆಗೂ ಅದೇ ಮಾತು, ಅದೇ ಧ್ವನಿ… ಆದರೆ ಈ ಧ್ವನಿ ಯಾರದ್ದಿರಬಹುದು ಎಂಬ ಬಗ್ಗೆ ಮಾತ್ರ ಯೋಚನೆ ಮಾಡುವವರು ತೀರಾ ವಿರಳ. ಯೋಚನೆ ಮಾಡಿದರೂ ಯಾರು ಎಂದು ಗೊತ್ತಾಗುವುದಾದರೂ ಹೇಗೆ?
    ಈ ಸುಮಧುರ ದನಿ ಡಾ. ಉಷಾ ಪಾಟಕ್‌ ಅವರದ್ದು. ಮೈಸೂರಿನವರು ಇವರು.

    ಇದನ್ನೂ ಓದಿ: ಮಾತೃಭಾಷೆ ಹಿಂದಿಯಲ್ಲೇ 8 ಲಕ್ಷ ಮಕ್ಕಳು ಫೇಲ್‌! ಇಂಗ್ಲಿಷ್‌ ಮೋಹ ಎಂದ ಸರ್ಕಾರ

    ಅಷ್ಟಕ್ಕೂ ಈಗ ಇವರ ಮಾತೇಕೆ ಎಂದರೆ, ಈ ಸುಮಧುರ ಕಂಠದ ಉಷಾ ಮೊನ್ನೆ ಮೊನ್ನೆ ಅಂದರೆ ಇದೇ 22ರಂದು ತಮ್ಮ 66ನೇ ವರ್ಷದಲ್ಲಿ ನಿಧನರಾಗಿರುವ ಸುದ್ದಿ ಬಂದಿದೆ.
    ಉಷಾ ಮೊದಲು ಬಿಎಸ್‌ಎನ್‌ಎಲ್‌ ಉದ್ಯೋಗಿಯಾಗಿದ್ದರು. ಆ ಸಮಯದಲ್ಲಿ ಲ್ಯಾಂಡ್‌ಲೈನ್‌ ಬಳಕೆದಾರರು ಇವರ ದನಿ ಕೇಳುತ್ತಿದ್ದರು. ಅಲ್ಲಿಂದ ಶುರುವಾದ ಇವರ ಪಯಣ ಮೊಬೈಲ್‌ ಕರೆಯವರೆಗೂ ಮುಂದುವರೆದಿದೆ.

    ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವೇಷಭೂಷಣಗಳು’ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಉಷಾ ಅವರು ದನಿ ಕಲಾವಿದೆ ಮಾತ್ರವಲ್ಲದೇ, ಆಕಾಶವಾಣಿಯ ʻಎʼ ಗ್ರೇಡ್ ಕಲಾವಿದೆ ಕೂಡ. ನೃತ್ಯ, ನಾಟಕ, ಹಾಡುಗಾರಿಕೆಯಲ್ಲಿಯೂ ಇವರು ಸಾಕಷ್ಟು ಹೆಸರು ಮಾಡಿದ್ದಾರೆ.

    ಸಂಸ್ಕೃತ ವಿದ್ವಾಂಸರಾಗಿರುವ ದುರ್ಗ ಹೈಪಾಜೆ ಶಂಕರ ಪಾಟಕ್‌ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳನ್ನು ಬಿಟ್ಟು ಇದೀಗ ಉಷಾ ಮರೆಯಾಗಿದ್ದಾರೆ.

    ಚೀನಾಕ್ಕೆ ಶಾಕ್‌ ಮೇಲೆ ಶಾಕ್‌! ಬಿಹಾರದ ಸೇತುವೆ ಟೆಂಡರ್‌ ರದ್ದು ಮಾಡಿದ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts