More

    ಖಾಸಗಿ ಶಿಕ್ಷಕರ ಪರ ಸದನದಲ್ಲಿ ಧ್ವನಿ ಎತ್ತುವೆ

    ದೇವದುರ್ಗ: ಗ್ರಾಮೀಣ ಭಾಗದ ಮಕ್ಕಳು ಹಾಗೂ ಯುವಕರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಇಂಥ ಸಂಸ್ಥೆಗಳು ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಶಾಸಕಿ ಜಿ.ಕರೆಮ್ಮ ನಾಯಕ ಹೇಳಿದರು.

    ಇದನ್ನೂ ಓದಿ: ಖಾಸಗಿ ಶಿಕ್ಷಕರ ಪರ ಸದನದಲ್ಲಿ ಧ್ವನಿ ಎತ್ತುವೆ

    ತಾಲೂಕಿನ ಹೂವಿನಹೆಡಗಿಯಲ್ಲಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.

    ಪ್ರತಿಯೊಬ್ಬರ ಸಾಧನೆ ಹಿಂದೆ ಗುರುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಬಡವರಿಗೆ ತ್ರಿವಿಧ ದಾಸೋಹ ನೀಡುತ್ತಿವೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಇಂಥ ಸಂಸ್ಥೆಗಳು ಮಾಡುತ್ತಿದ್ದು ಮಕ್ಕಳಿಗೆ ಅನ್ನ, ಅಕ್ಷರ, ಆಸರೆ ನೀಡುತ್ತಿವೆ.

    ಖಾಸಗಿ ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭದ ಕೆಲಸವಲ್ಲ. ಹಲವು ಜನರ ಪರಿಶ್ರಮ, ಬೆವರಿನ ಹನಿಯಿದೆ. ಆದರೆ, ಇಂಥ ಸಂಸ್ಥೆಗಳು ಹಲವು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿವೆ. ಖಾಸಗಿ ಶಿಕ್ಷಕರು ಕೂಡ ಹಲವು ತೊಂದರೆ ಅನುಭವಿಸುತ್ತಿದ್ದಾರೆ.

    ವು ಎಷ್ಟೇ ಸಮಸ್ಯೆ ಎದುರಿಸಿದರೂ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಸರ್ಕಾರ ಇಂಥ ಶಿಕ್ಷಕರು ಹಾಗೂ ಸಂಸ್ಥೆಗಳಿಗೆ ವಿಶೇಷ ಯೋಜನೆ ರೂಪಿಸಬೇಕಿದೆ ಎಂದರು. ಉತ್ತಮ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.

    ವಕೀಲ ವಿ.ಎಂ.ಮೇಟಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ, ಚಂದ್ರಶೇಖರ ಚಿಕ್ಕಬೂದೂರು, ತಿರುಪತಿ ಸೂಗೂರು, ವೆಂಕಟೇಶ ನೀಲಗಲ್, ಪತ್ರಕರ್ತ ದಶರಥ ಸಾವೂರ್, ಮೈನುದ್ದೀನ್ ಕಾಟಮಳ್ಳಿ, ರೇಣುಕಾ ಮಯೂರಸ್ವಾಮಿ, ಸೀಕರೇಶ ಪಾಟೀಲ್, ಶರಣಗೌಡ, ಇಸಾಕ್ ಮೇಸ್ತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts