More

    ಧ್ವನಿ ಇಲ್ಲದವರಿಗೆ ಮಾತದ ಸಾಹಿತ್ಯ

    ಹಟ್ಟಿಚಿನ್ನದಗಣಿ: ಸಾಹಿತ್ಯ ಹಿಂದೆ ಉಳ್ಳವರ ಸ್ವತ್ತಾಗಿತ್ತು. ಆಧುನಿಕ ಯುಗದಲ್ಲಿ ತನ್ನ ಬಾಹುಗಳನ್ನ ವಿಶಾಲವಾಗಿ ಚಾಚಿ ಎಲ್ಲರನ್ನು ಅಪ್ಪಿಕೊಳ್ಳುತ್ತಿದೆ. ದಲಿತ-ಬಂಡಾಯ ಸಾಹಿತ್ಯ, ಧ್ವನಿ ಇಲ್ಲದವರಿಗೆ, ಧ್ವನಿ ನೀಡಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕು ಮಾಧ್ಯಮ ಸಲಹೆಗಾರ ಅಮರಯ್ಯ ಘಂಟಿ ಹೇಳಿದರು.

    ಇದನ್ನೂ ಓದಿ: ಕನ್ನಡ ಸಾಹಿತ್ಯ ಕಲಿಕೆಯತ್ತ ನಿರಾಸಕ್ತಿ

    ದಸಾಪ ಯುವ ಘಟಕ ಲಿಂಗಸಗೂರುಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ 30ನೇ ಸಂಸ್ಥಾಪನ ದಿನಾಚರಣೆಯಲ್ಲಿ ಶನಿವಾರ ಮಾತನಾಡಿದರು.
    ಹಿಂದಿನ ಕಟ್ಟುಪಾಡುಗಳು ಸಂಪ್ರದಾಯಗಳು ಸಾಮಾಜಿಕ ಅನಿಷ್ಠ್ಠ ಪದ್ಧತಿ ಜಾತಿ, ಲಿಂಗ, ವರ್ಣಭೇದ ನೀತಿಯಿಂದ

    ಬಹುಸಂಖ್ಯಾತರನ್ನ ಸಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ವಂಚಿಸಲಾಗಿತ್ತು. ದಾಸರ ಕೀರ್ತನೆ, ಶರಣರ ವಚನಗಳ ಮೂಲಕ ಸಾಹಿತ್ಯದಲ್ಲಿ ವಿಭಿನ್ನ ಆಯಾಮಗಳನ್ನ ಕಟ್ಟಿಕೊಟ್ಟರು ಎಂದರು. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ ರಾಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.

    ದಲಿತ ಸಾಹಿತ್ಯ ಪರಿಷತ್ ತಾಲೂಕು ಯುವಘಟಕದ ಅಧ್ಯಕ್ಷ ಸುರೇಶ ಮಾಚನೂರು, ಮಲ್ಲಿಕಾರ್ಜುನ್ ಚಿತ್ರನಾಳ್, ಮಲ್ಲಿಕಾರ್ಜುನ್ ಕಡೆಚೂರು, ಯಮನೂರ್ ಕೋಠಾ, ಮಲ್ಲಿಕಾರ್ಜುನ್ ಮಂಡಲಗುಡ್ಡ, ರಾಮಣ್ಣ ಹೊನ್ನಳ್ಳಿ, ಜಗದೀಶ್ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts