More

    ಕನ್ನಡ ಸಾಹಿತ್ಯ ಕಲಿಕೆಯತ್ತ ನಿರಾಸಕ್ತಿ

    ಸಿರಿಗೆರೆ: ಯುವಕರು ಸಾಫ್ಟವೇರ್ ಉದ್ಯೋದತ್ತ ಆಕರ್ಷಿತರಾಗಿದ್ದು, ಕನ್ನಡ ಸಾಹಿತ್ಯ ಅಧ್ಯಯನ ಮಾಡುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಮಠದ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿ, ನಮ್ಮ ಪೂರ್ವಿಕರು ಅನಕ್ಷರಸ್ಥರಾಗಿದ್ದರೂ ಭಾಷೆ ಮೇಲೆ ಹೆಚ್ಚು ಹಿಡಿತ ಹೊಂದಿದ್ದರು. ಆದರೆ, ಈಗಿನ ಪೀಳಿಗೆ ಪರಿಶುದ್ಧ ಕನ್ನಡವನ್ನೇ ಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರೊ.ಗಿಲ್ ಬೆನ್ ಹೆರೂತ್ ಅವರು ಇಸ್ತ್ರೇಲ್ ಮೂಲದವರಾಗಿದ್ದು, ಅಮೆರಿಕಾದ ದಕ್ಷಿಣ ಫ್ರೋರಿಡಾ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಕನ್ನಡ ಭಾಷೆ, ಸಾಹಿತ್ಯ, ಕಾವ್ಯಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಸುಲಲಿತವಾಗಿ ಕನ್ನಡ ಭಾಷೆಯನ್ನು ಸಂವಾದ ನಡೆಸುವಷ್ಟು ಭಾಷಾಜ್ಞಾನ ಹೊಂದಿದ್ದಾರೆ ಎಂದರು.

    ಪ್ರೊ.ಗಿಲ್ ಬೆನ್ ಹೆರೂತ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಭಾರತಕ್ಕೆ ಬಂದಿದ್ದೇನೆ. ವಿಶೇಷವಾಗಿ ರಗಳೆಯ ಕವಿ ಹರಿಹರ, ರಾಘವಾಂಕ, ಕುಮಾರವ್ಯಾಸ ಅವರು ಕನ್ನಡ ಪರಂಪರೆಯ ಅದ್ವಿತೀಯ ಮಹಾಪುರುಷರು ಎಂದು ಬಣ್ಣಿಸಿದರು.

    ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ರಂಗನಾಥ್, ಪ್ರಾದೇಶಿಕ ಅಧಿಕಾರಿ ಕೆ.ಇ.ಬಸವರಾಜಪ್ಪ, ಪ್ರಾಚಾರ್ಯ ಶಿವನಗೌಡ ಕೆ.ಸುರಕೋಡ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ, ಮುಖ್ಯಶಿಕ್ಷಕರಾದ ಎಂ.ಎಸ್.ಸೋಮಶೇಖರ್, ಎಂ.ಎನ್.ಶಾಂತಾ, ಕೆ.ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts