More

    ಪ್ರತ್ಯೇಕ ಅಪಘಾತ ನಾಲ್ವರ ಸಾವು

    ರಾಯಚೂರು: ತಾಲೂಕಿನ ಎರಡು ಕಡೆ ಜರುಗಿದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಜರುಗಿದೆ. ನಗರದ ಹೊರವಲಯದ ಮಿಟ್ಟಿ ಮಲ್ಕಾಪುರ ಗ್ರಾಮದ ಹತ್ತಿರ ಸಾರಿಗೆ ಸಂಸ್ಥೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದು, ನಗರದ ರಾಯಚೂರು ವಿವಿ ಹತ್ತಿರ ಹೆದ್ದಾರಿಯಲ್ಲಿ ಜರುಗಿದ ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾನೆ. ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ನಗರದ ಇಂದಿರಾ ನಗರ ನಿವಾಸಿಗಳಾದ ರಾಘವೇಂದ್ರ (28), ಪರಶುರಾಮ (30), ಗೋವಿಂದ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲೂಕಿನ ಯರಗೇರಾ ಹತ್ತಿರದ ರಾಯಚೂರು ವಿವಿ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ತಾಲೂಕಿನ ಗಾಣಧಾಳ ಗ್ರಾಮದ ಪ್ರಾಣೇಶ (19) ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts