More

    ಟ್ರಾವೆಲ್ ಏಜೆಂಟ್ ಆತ್ಮಹತ್ಯೆಗೂ ವಿದ್ಯಾರ್ಥಿ ವೀಸಾಗೂ ಏನು ಸಂಬಂಧ? ಆತ್ಮಹತ್ಯೆ ಪತ್ರದಲ್ಲಿತ್ತು ನಾಲ್ವರ ಹೆಸರು

    ಲುಧಿಯಾನ: ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ.
    42 ವರ್ಷದ ಮೃತ ವ್ಯಕ್ತಿ ಲುಧಿಯಾನದ ಜಡ್ಡೋಲಿ ಗ್ರಾಮದ ನಿವಾಸಿ.
    ಡೈರಿ ಮಾಲೀಕನೂ ಆಗಿದ್ದ ಆ ಟ್ರಾವೆಲ್ ಏಜೆಂಟ್ ನ ಶವವನ್ನು ಕಾಲುವೆ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಗಾದ ಘೋಲಿಯಾ ಖುರ್ದ್ ಗ್ರಾಮದ ಬಳಿ ಇರುವ ಕಾಲುವೆಯಿಂದ ಆ ವ್ಯಕ್ತಿಯ ಶವವನ್ನು ಹೊರತೆಗೆಯಲಾಗಿತ್ತು.
    ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ನಾಲ್ವರು ಆರೋಪಿಗಳ ವಿರುದ್ಧ ಲುಧಿಯಾನದಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಮೃತ ವ್ಯಕ್ತಿಯ ಕಚೇರಿಯಿಂದ ಆತ್ಮಹತ್ಯೆ ಪತ್ರವನ್ನು ಅವರ ಕುಟುಂಬವು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. .
    ಆರೋಪಿಗಳನ್ನು ದೀಪಾ ಬಡೇಶಾ, ದರ್ಶಿ, ನರ್ಜೀತ್ ಸಿಂಗ್ ಮತ್ತು ಪಪ್ಪು ಥೀಕಿವಾಲ್ ಎಂದು ಗುರುತಿಸಲಾಗಿದೆ. ದೀಪಾ ಮತ್ತು ದರ್ಶಿ ಇಬ್ಬರೂ ನಾರಂಗ್ವಾಲ್ ಗ್ರಾಮದ ನಿವಾಸಿಗಳು. ಪಪ್ಪು ಮತ್ತು ನರ್ಜೀತ್ ಭಾಯ್ ರೂಪಾ ಗ್ರಾಮದವರು.
    ಟ್ರಾವೆಲ್ ಏಜೆಂಟ್ ಆಗಿಯೂ ಕೆಲಸ ಮಾಡುತ್ತಿದ್ದ ಡೈರಿ ಮಾಲೀಕ ಜುಲೈ 12 ರಂದು ಮನೆಯಿಂದ ಹೊರಹೋಗಿದ್ದ. ತಡರಾತ್ರಿವರೆಗೂ ಮನೆಗೆ ಹಿಂದಿರುಗದಿದ್ದಾಗ, ಆತನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

    ಜುಲೈ 28 ರಂದು ಆ ವ್ಯಕ್ತಿಯ ಶವ ಕಾಲುವೆ ಬಳಿ ಸಿಕ್ಕಿದೆ. ಮೃತ ವ್ಯಕ್ತಿಯ ಸಹೋದರ ತನ್ನ ಸಹೋದರನ ಕಚೇರಿಯಲ್ಲಿ ಆತ್ಮಹತ್ಯೆ ಪತ್ರವನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆ ಪತ್ರದಲ್ಲಿ, ಮೃತ ವ್ಯಕ್ತಿ ತನಗೆ ಕಿರುಕುಳ ಮತ್ತು ಹಣಕ್ಕಾಗಿ ಬೆದರಿಕೆ ಹಾಕಿದ ನಾಲ್ಕು ವ್ಯಕ್ತಿಗಳನ್ನು ಹೆಸರಿಸಿದ್ದಾನೆ.
    ಅವರ ಮಕ್ಕಳ ವಿದ್ಯಾರ್ಥಿ ವೀಸಾ ಪಡೆಯಲು ಸಾಧ್ಯವಾಗದ ಕಾರಣ ಈ ವ್ಯಕ್ತಿಗೆ ಆರೋಪಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
    ಎಎಸ್ಐ ಪ್ರಿತ್ಪಾಲ್ ಸಿಂಗ್, ಮೃತ ವ್ಯಕ್ತಿಯ ದೇಹವನ್ನು ಡಿಎನ್ಎ ಪ್ರೊಫೈಲಿಂಗ್​​ಗಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts