More

    ಒಂದು ಕಡೆ ಹೋರಾಟ, ಇನ್ನೊಂದ್ಕಡೆ ಧರಣಿ! ಸಿಎಂ ಮನೆ ಮುಂದೆ ಧರಣಿ ಕುಳಿತ ಗೌತಮ್​ ಗಂಭೀರ್​

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಒಂದತ್ತ ರೈತರು ಹೋರಾಟ ನಡೆಸುತ್ತಿದ್ದರೆ ಇನ್ನೊಂದತ್ತ ಬಿಜೆಪಿ ನಾಯಕರು ಧರಣಿ ಕುಳಿತಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮನೆ ಮುಂದೆ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭಿರ್​ ಹಾಗೂ ಮನೋಜ್​ ತಿವಾರಿ ಅವರು ಧರಣಿ ನಡೆಸುತ್ತಿದ್ದವರ ಜತೆ ಸೇರಿಕೊಂಡಿದ್ದಾರೆ.

    ಇದನ್ನೂ ಓದಿ: ಸ್ಕೂಲ್​ ಬ್ಯಾಗ್​ ತೂಕ ಮತ್ತಷ್ಟು ಇಳಿಕೆ, ಹೋಂ ವರ್ಕ್​ಗೂ ಬಿತ್ತು ಕತ್ತರಿ! ಈ ಕ್ಲಾಸಿನ ಮಕ್ಕಳಿಗೆ ಹೋಂ ವರ್ಕ್​ ಇಲ್ಲವೇ ಇಲ್ಲ!

    ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿಯ ಪುರಸಭೆ ನಿಗಮಗಳ ನಾಯಕರು ಫ್ಲಾಗ್​ಸ್ಟಾಪ್​ ರಸ್ತೆಯಲ್ಲಿರುವ ಸಿಎಂ ನಿವಾಸದ ಮುಂದೆ ಸೋಮವಾರದಿಂದ ಧರಣಿ ನಡೆಸುತ್ತಿದ್ದಾರೆ. ದೆಹಲಿ ಸರ್ಕಾರದಿಂದ ಬರಬೇಕಿದ್ದ 13 ಸಾವಿರ ಕೋಟಿ ರೂಪಾಯಿ ಬಾಕಿ ಪಾವತಿಸುವಂತೆ ಒತ್ತಾಯಿಸಿ ಧರಣೆ ನಡೆಸಲಾಗುತ್ತಿದೆ. ಮೇಯರ್​ಗಳಾದ ಜಯಪ್ರಕಾಶ್​, ಅನಾಮಿಕ ಮಿಥಿಲೇಶ್​ ಹಾಗೂ ನಿರ್ಮಲ್​ ಜೈನ್​ ಧರಣಿ ಕುಳಿತಿದ್ದಾರೆ. ಇವರ ಜತೆ ಕೆಲ ಮಹಿಳಾ ಕೌನ್ಸಿಲರ್​ಗಳೂ ಸಾಥ್​ ಕೊಟ್ಟಿದ್ದಾರೆ.

    ಇದನ್ನೂ ಓದಿ: ರೈತ ಹೋರಾಟಕ್ಕೆ ಮತ್ತೋರ್ವ ರೈತ ಬಲಿ! ಈವರೆಗೆ ಐದು ರೈತರ ಕೊನೆಯುಸಿರು

    ಇಂದು ಧರಣಿಯಲ್ಲಿ ಭಾಗವಹಿಸಿ ಮನೋಜ್​ ತಿವಾರಿ ಅವರು ಮಾತನಾಡಿ, ಕೇಜ್ರಿವಾಲ್​ ಜನಸಾಮಾನ್ಯರ ವಿರೋಧಿ ಎಂದು ಆರೋಪಿಸಿದ್ದಾರೆ. ಪುರಸಭೆಯ 13 ಸಾವಿರ ಕೋಟಿ ಹಣವನ್ನು ಅವರು ಇಟ್ಟುಕೊಂಡಿದ್ದಾರೆ. ನೈರ್ಮಲ್ಯ ಕಾರ್ಯಕರ್ತರು, ವೈದ್ಯರು ಶುಶ್ರೂಷಕಿಯರು ಮತ್ತು ಇತರೆ ಉದ್ಯೋಗಿಗಳಿಗೆ ವೇತನ ನೀಡಲು ಆ ಮೊತ್ತ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts