More

    ಬಾಲಿವುಡ್‌ನ ಈ ನಟ ಕೂಡ ಆತ್ಮಹತ್ಯೆಗೆ ಮುಂದಾಗಿದ್ದರಂತೆ!

    ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಚರ್ಚೆಯಲ್ಲಿರುವಾಗಲೇ ಇನ್ನೊಬ್ಬ ಖ್ಯಾತ ನಟ ಮನೋಜ್ ಬಾಜಪೇಯಿ ತಾವು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

    ‘‘ನಾನೂ ಬಿಹಾರದ ಹಳ್ಳಿಯ ಬಡ ರೈತನ ಮಗ. ನಮ್ಮ ಹಳ್ಳಿಯಲ್ಲಿ ಟಾಕೀಸ್ ಇರಲಿಲ್ಲ. ಯಾವತ್ತಾದರೂ ಸಿಟಿಗೆ ಹೋದರೆ ಅಮಿತಾಭ್ ಬಚ್ಚನ್ ಸಿನಿಮಾ ನೋಡದೇ ವಾಪಸ್ ಬರುತ್ತಿರಲಿಲ್ಲ. 9ನೇ ವಯಸ್ಸಿಗೇ ನಾನು ಸಿನಿಮಾದಲ್ಲಿ ನಟಿಸುವ ಕನಸು ಕಾಣುತ್ತಿದ್ದೆ. 17ನೇ ವಯಸ್ಸಿಗೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ನಾಟಕದ ತರಬೇತಿ ಪಡೆದೆ. ನಂತರ ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಅರ್ಜಿ ಸಲ್ಲಿಸಿದೆ. ತಿರಸ್ಕೃತವಾಯಿತು. ಧೃತಿಗೆಡದೆ ಮೂರು ಸಲ ಅರ್ಜಿ ಹಾಕಿದೆ. ಆದರೂ ಅಡ್ಮಿಷನ್ ಸಿಗಲಿಲ್ಲ. ಆಗ ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮನಸ್ಸು ರೋಸಿ ಹೋಗಿತ್ತು’’ ಎಂದು ವಿವರಿಸಿದ್ದಾರೆ.

    ‘‘ಆ ಸಂದರ್ಭದಲ್ಲಿ ನನ್ನ ಜತೆ ನಿಂತು ಪ್ರೋತ್ಸಾಹಿಸಿ ನಾನು ಅಂತಹ ಕೆಲಸ ಮಾಡದಂತೆ ತಡೆದವರು ಸ್ನೇಹಿತರು. ನನ್ನನ್ನು ಅವರು ಎಷ್ಟರ ಮಟ್ಟಿಗೆ ಕಾಯುತ್ತಿದ್ದರು ಎಂದರೆ ನಾನು ಯಾವ ಸಂದರ್ಭದಲ್ಲೂ ಏಕಾಂಗಿಯಾಗಿ ಇರದಂತೆ ತಿಂಗಳುಗಳ ಕಾಲ ಕಾಯ್ದರು. ರಾತ್ರಿ ಕೂಡ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ. ನನ್ನ ಪಕ್ಕದಲ್ಲೇ ಮಲಗುತ್ತಿದ್ದರು. ನನಗೆ ಎನ್‌ಎಸ್‌ಡಿಯಲ್ಲಿ ಅಡ್ಮಿಷನ್ ಸಿಗುವವರೆಗೂ ಹೀಗೇ ನೋಡಿಕೊಳ್ಳುತ್ತಿದ್ದರು….’’ ಎಂದು ಮನೋಜ್ ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಲಕ್ಷ್ಮೀ ಬಾಂಬ್​’ ಮತ್ತು ‘ಭುಜ್​’, ಓಟಿಟಿಗೆ ಸೇಲ್​ ಆಗಿದ್ದು ಎಷ್ಟಕ್ಕೆ ಗೊತ್ತಾ?

    ನಂತರ ಮುಂಬೈಗೆ ಸ್ಥಳಾಂತರಗೊಂಡೆ. ಚಾಳ್ ಒಂದರಲ್ಲಿ ಬಾಡಿಗೆ ಮನೆ ತೆಗೆದುಕೊಂಡೆ. ನಟನೆಯ ಕೆಲಸ ಹುಡುಕತೊಡಗಿದೆ. ಹಲವು ಅವಮಾನಗಳನ್ನು ಅನುಭವಿಸಿದೆ. ಒಮ್ಮೆ ನಿರ್ದೇಶಕರೊಬ್ಬರು ನನ್ನ ಫೋಟೊ ಹರಿದುಹಾಕಿದ್ದರು. ಒಬ್ಬರಂತೂ ನನ್ನ ಅಭಿನಯ ನೋಡಿ ಗೆಟ್‌ಔಟ್ ಎಂದಿದ್ದರು. ನಿನ್ನ ಮುಖ ಹೀರೊ ಪಾತ್ರಕ್ಕೆ ಫಿಟ್ ಆಗುವುದಿಲ್ಲ ಎಂದು ನನ್ನೆದುರೇ ಜರಿದಿದ್ದರು. ಬೆಳ್ಳಿತೆರೆಯಲ್ಲಿ ನೆಲೆ ನಿಲ್ಲಲು ಬಹಳ ಕಷ್ಟಪಟ್ಟೆ. ಎಷ್ಟೋ ಸಲ ಮನೆ ಬಾಡಿಗೆ ಕೊಡಲೂ ಆಗುತ್ತಿರಲಿಲ್ಲ. ವಡಾ ಪಾವ್ ಕೂಡ ದುಬಾರಿ ಎನಿಸುತ್ತಿತ್ತು’’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ‘‘ಆದರೆ ಹೊಟ್ಟೆಯ ಹಸಿವು ಯಾವತ್ತೂ ನಾನು ಕನಸು ಕಾಣುವುದಕ್ಕೆ ಅಡ್ಡಿಯಾಗಲಿಲ್ಲ. ನಾಲ್ಕು ವರ್ಷಗಳ ದೀರ್ಘ ಪ್ರಯತ್ನದ ನಂತರ ಮಹೇಶ್ ಭಟ್ ಅವರ ಟಿವಿ ಸೀರಿಯಲ್‌ನಲ್ಲಿ ಕೆಲಸ ಸಿಕ್ಕಿತು. ಅದರಲ್ಲಿನ ನಟನೆಯನ್ನು ನೋಡಿ ರಾಮ್‌ಗೋಪಾಲ್ ವರ್ಮಾ ‘ಸತ್ಯಾ’ ಚಿತ್ರದಲ್ಲಿ ಅವಕಾಶ ಕೊಟ್ಟರು. ನಂತರ ಒಂದರ ಮೇಲೊಂದು ಅವಕಾಶಗಳು, ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಈವರೆಗೆ 67 ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ಬಿಹಾರಿ ಹುಡುಗನೊಬ್ಬ 9 ವರ್ಷದವನಿದ್ದಾಗ ಕಂಡ ಕನಸನ್ನು ನನಸು ಮಾಡಿಕೊಂಡ ರೀತಿ…’’ ಎಂದು ಹೇಳಿದ್ದಾರೆ.

    ಸಾಯೋಕ್ಕಿಂತ ಮುನ್ನ ಸುಶಾಂತ್​ ಏನೆಲ್ಲಾ ಮಾಡಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts