More

    ಕೈ ಬಿಟ್ಟು ತೆನೆ ಹೊತ್ತ ಮನೋಹರ ತಹಶೀಲ್ದಾರ

    ಹಾನಗಲ್ಲ: ಕಾಂಗ್ರೆಸ್ ಹೈಕಮಾಂಡ್ ನನಗೆ ಮಾಡಿದ ದ್ರೋಹವನ್ನು ಪ್ರತಿಭಟಿಸಿ ಪಕ್ಷವನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ. ಇನ್ನೆಂದೂ ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ. ರೈತ ಹಾಗೂ ಜನಪರವಾದ ಜಾತ್ಯತೀತ ಜನತಾ ದಳ ಪಕ್ಷವನ್ನು ಸೇರ್ಪಡೆಗೊಳ್ಳಲು ತೀರ್ವನಿಸಿದ್ದೇನೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ ಸ್ಪಷ್ಟಪಡಿಸಿದರು.

    ಪಟ್ಟಣದ ನೂರಾನಿ ಶಾದಿ ಮಹಲ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಮನೋಹರ ತಹಶೀಲ್ದಾರ ಸ್ವಾಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ತಾಯಿಯೆಂದು ಭಾವಿಸಿ ನಡೆದುಕೊಂಡೆ. ಆದರೆ, ತಾಯಿಯ ಹಾಲೇ ವಿಷವಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ ಎಂದರು.

    ನನ್ನ ಹಿರಿತನ ಕಡೆಗಣಿಸಿ 2018ರಲ್ಲಿ ಶಾಸಕನಾಗಿದ್ದರೂ ಹೊರಗಿನವರಿಗೆ ಟಿಕೆಟ್ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲೂ ನನ್ನನ್ನು ಮನವೊಲಿಸಿ ಮಾನೆ ಅವರಿಗೆ ಟಿಕೆಟ್ ನೀಡಿದ್ದರು. ಆದರೂ ನನ್ನೆಲ್ಲ ನೋವು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದೆ. ಆದರೆ, ಮಾನೆ ಹೊರಗಿನವರೆಂದು ಸೋಲನುಭವಿಸಿದರು. ಈ ಬಾರಿಯಾದರೂ ನನಗೆ ಅವಕಾಶ ನೀಡುವಂತೆ ಹೈಕಮಾಂಡ್ ಬಳಿ ಕೋರಿಕೊಂಡಿದ್ದೆ. ಆದರೆ, ಈ ಬಾರಿಯೂ ನನ್ನನ್ನು ಕಣದಿಂದ ಹಿಂದೆ ಸರಿಸುವ ಯತ್ನ ನಡೆದಿದೆ. ಅಭ್ಯರ್ಥಿ ಘೊಷಣೆಯ ನಂತರ ಸೌಜನ್ಯಕ್ಕೂ ಕಾಂಗ್ರೆಸ್ ಮುಖಂಡರು ನನ್ನನ್ನು ಸಂರ್ಪಸಿಲ್ಲ. ಹೀಗಾಗಿ ಕಾಂಗ್ರೆಸ್​ಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಒಂದು ವಾರದಿಂದ ತಾಲೂಕಿನ ಹಿಂಬಾಲಕರು, ಆಪ್ತರೊಂದಿಗೆ ನಮ್ಮ ಮುಂದಿನ ನಡೆ ಕುರಿತು ರ್ಚಚಿಸಿದ್ದೇವೆ. ಇನ್ನುಮುಂದೆ ತಾಲೂಕಿನ ಮತದಾರರೇ ನಮಗೆ ಹೈಕಮಾಂಡ್, ಪಕ್ಷೇತರವಾಗಿ ಸ್ಪರ್ಧಿಸುವ ಚಿಂತನೆ ಕೂಡ ನಡೆದಿತ್ತು. ಆದರೆ, ಯಾವುದಾದರೊಂದು ಪಕ್ಷದೊಡನಿದ್ದರೆ, ಪಕ್ಷದ ಸಿದ್ಧಾಂತ, ಪ್ರಣಾಳಿಕೆ, ಚಿನ್ಹೆ, ನಾಯಕತ್ವಗಳಿರುತ್ತವೆ. ಹೀಗಾಗಿ ರೈತರ ಪರವಾಗಿರುವ ಜಾತ್ಯಾತೀತ ಜನತಾ ದಳವನ್ನು ಸೇರಲು ಅಂತಿಮವಾಗಿ ನಿರ್ಧರಿಸಿದ್ದೇವೆ ಎಂದು ತಹಶೀಲ್ದಾರ್ ವಿವರಿಸಿದರು.

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾರುತಿ ಪುರ್ಲಿ, ರಾಘವೇಂದ್ರ ತಹಶೀಲ್ದಾರ್ ಮುಖಂಡರಾದ ದಾನಪ್ಪ ಗಂಟೇರ, ಸಿದ್ದಪ್ಪ ಹಿರಗಪ್ಪನವರ, ಸುರೇಶ ದೊಡ್ಡಕುರುಬರ, ಚನಬಸನಗೌಡ ಪಾಟೀಲ, ರವೀಂದ್ರ ಚಿಕ್ಕೇರಿ, ವಿನಾಯಕ ಕುರುಬರ, ಸಿ.ಬಿ. ಪಾಟೀಲ, ಜಿ.ಎಂ. ಮುಲ್ಲಾ, ಚಂದ್ರಣ್ಣ ಕಳ್ಳಿ, ಪುಟ್ಟಪ್ಪ ವಾಸನ, ದ್ಯಾವನಗೌಡ ಪಾಟೀಲ, ಶಿವಾಜಿ ಆರೇರ, ಶಂಕ್ರಣ್ಣ ಪ್ಯಾಟಿ, ಶ್ರೀನಿವಾಸ ಭದ್ರಾವತಿ, ಮೈಲಾರೆಪ್ಪ ಕಬ್ಬೂರ, ಲಾಲಖಾನವರ, ಎಂ.ಎಂ. ವೆಂಕಟಾಪೂರ, ನಾಗರಾಜ ಕರೆಣ್ಣನವರ ಇತರರಿದ್ದರು.

    ಜೆಡಿಎಸ್ ಮುಖಂಡರ ಸ್ವಾಗತ:

    ಜೆಡಿಎಸ್ ತಾಲೂಕಾಧ್ಯಕ್ಷ ರಾಮನಗೌಡ ಪಾಟೀಲ, ಪಕ್ಷದ ಮುಖಂಡರಾದ ರಾಜ್ಯ ಸಮಿತಿ ಸದಸ್ಯ ಬಿ.ಎಂ. ಪಾಟೀಲ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಸಮನಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಗಣಾಚಾರಿ, ಉಪಾಧ್ಯಕ್ಷೆ ಶೀಲಾ ಭದ್ರಾವತಿ, ಶಹರ ಘಟಕದ ಅಧ್ಯಕ್ಷೆ ಜ್ಯೋತಿ ಶೀಗಿಹಳ್ಳಿ, ಶೈಲಾ ಕರೆಪ್ಪನವರ, ಗೌಸ್ ಆಲದಕಟ್ಟಿ ಹಾಗೂ ಇತರರು ಮನೋಹರ ತಹಶೀಲ್ದಾರ್ ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts