More

    ಶೀಘ್ರದಲ್ಲೇ ಮೇರಿ ಮಾತಿ ಮೇರಾ ದೇಶ್​ ಅಭಿಯಾನಕ್ಕೆ ಚಾಲನೆ: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಘೋಷಣೆ

    ನವದೆಹಲಿ: ಹುತಾತ್ಮರಾದ ವೀರ ಯೋಧರನ್ನು ಗೌರವಿಸಲು ಶೀಘ್ರದಲ್ಲೇ ‘ಮೇರಿ ಮಾತಿ ಮೇರಾ ದೇಶ್​’ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು ಹೇಳಿದರು.

    ಅಮೃತ ಕಳಶ ಯಾತ್ರೆ 

    103ನೇ ಆವೃತ್ತಿಯ ಮನ್​ ಕಿ ಬಾತ್​ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಗೌರವಿಸಲು ದೇಶದಲ್ಲಿ ಮೇರಿ ಮಾತಿ ಮೇರಾ ದೇಶ್ ಎಂಬ ದೊಡ್ಡ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದ ಸಂದರ್ಭದಲ್ಲಿ ಅಮೃತ ಕಳಶ ಯಾತ್ರೆಯನ್ನು ದೇಶಾದ್ಯಂತ ಕೈಗೊಳ್ಳಲಾಗುವುದು. ಹಳ್ಳಿಗಳು ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ 7500 ಕಳಶಗಳಲ್ಲಿ ಮಣ್ಣು ಮತ್ತು ಗಿಡಗಳನ್ನು ಹೊತ್ತ ಯಾತ್ರೆಯು ದೆಹಲಿಯನ್ನು ತಲುಪಲಿದೆ. ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಕಳಶ’ದಲ್ಲಿ ಒಯ್ಯುವ ಮಣ್ಣು ಮತ್ತು ಸಸ್ಯಗಳಿಂದ ‘ಅಮೃತ ವಾಟಿಕಾ’ ಅನ್ನು ತಯಾರಿಸಲಾಗುವುದು ಎಂದು ತಿಳಿಸಿದರು.

    ಒಂದೇ ದಿನದಲ್ಲಿ 30 ಕೋಟಿ ಮರಗಳು

    ಕಳೆದ ಕೆಲವು ದಿನಗಳು ಪ್ರಕೃತಿ ವಿಕೋಪದಿಂದ ಆತಂಕ ಮತ್ತು ತೊಂದರೆಗಳು ಎದುರಾಗಿವೆ. ಯಮುನಾ ಸೇರಿದಂತೆ ಹಲವು ನದಿಗಳ ಪ್ರವಾಹದಿಂದ ಅನೇಕ ಸ್ಥಳಗಳಲ್ಲಿ ಜನರು ತೊಂದರೆ ಅನುಭವಿಸಬೇಕಾಯಿತು. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಘಟನೆಗಳು ಸಂಭವಿಸಿವೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿ ನಿರ್ಮಿಸಲಾದ 60,000 ಕ್ಕೂ ಹೆಚ್ಚು ಅಮೃತ ಸರೋವರಗಳು ಇಂದು ತಮ್ಮ ಕಾಂತಿಯನ್ನು ಹೆಚ್ಚಿಸುತ್ತಿವೆ. 50,000 ಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸುವ ಕೆಲಸಗಳೂ ನಡೆಯುತ್ತಿದೆ. ನಮ್ಮ ದೇಶದ ಜನರು ನೀರಿನ ಸಂರಕ್ಷಣೆಗೆ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಉತ್ತರ ಪ್ರದೇಶದಿಂದ ಪ್ರೋತ್ಸಾಹದಾಯಕ ಸುದ್ದಿ ಒಂದು ಬಂದಿದೆ. ಅದೇನೆಂದರೆ, ಕೆಲವು ದಿನಗಳ ಹಿಂದೆ ಯುಪಿಯಲ್ಲಿ ಒಂದೇ ದಿನದಲ್ಲಿ 30 ಕೋಟಿ ಮರಗಳನ್ನು ನೆಟ್ಟ ದಾಖಲೆಯನ್ನು ಮಾಡಲಾಗಿದೆ ಎಂದರು.

    ಇದನ್ನೂ ಓದಿ: ಯುವಕ ತನ್ನ ಸಂಬಂಧಿ ಮಹಿಳೆ ಜತೆ ಕುಳಿತು ಪ್ರಯಾಣಿಸಿದ್ರೂ ಸಹಿಸದ ಕಂಡಕ್ಟರ್​! ಬಸ್​ನಲ್ಲೇ ಹೈಡ್ರಾಮ

    ಪವಿತ್ರ ಶ್ರಾವಣ ಮಾಸ 

    ನನ್ನ ಪ್ರೀತಿಯ ದೇಶವಾಸಿಗಳೇ, ಪ್ರಸ್ತುತ ಪವಿತ್ರ ಶ್ರಾವಣ ಮಾಸ ನಡೆಯುತ್ತಿದೆ. ಮಹಾದೇವನನ್ನು ಪೂಜಿಸುವ ಜೊತೆಗೆ, ‘ಶ್ರಾವಣ’ವು ಹಸಿರು ಮತ್ತು ಸಂತೋಷ ಸಂಕೇತವಾಗಿದೆ. ನಮ್ಮ ದೇಶದ ತೀರ್ಥಯಾತ್ರೆಗಳಿಗೆ ಪ್ರಪಂಚದಾದ್ಯಂತದ ಜನರು ಬರುತ್ತಿದ್ದಾರೆ. ಅಮರನಾಥ ಯಾತ್ರೆಗೆ ಕ್ಯಾಲಿಫೋರ್ನಿಯಾದಿಂದ ಬಂದ ಇಬ್ಬರು ಅಮೆರಿಕನ್ ಸ್ನೇಹಿತರ ಬಗ್ಗೆ ನನಗೆ ತಿಳಿದಿದೆ. ನಾನು ಇತ್ತೀಚೆಗೆ ಫ್ರಾನ್ಸ್​ಗೆ ಭೇಟಿ ನೀಡಿದಾಗ ಷಾರ್ಲೆಟ್ ಚಾಪಿನ್ ಎಂಬ ಯೋಗ ಶಿಕ್ಷಕಿಯನ್ನು ಭೇಟಿ ಮಾಡಿದೆ. ಆಕೆಗೆ 100 ವರ್ಷ ವಯಸ್ಸು. ಕಳೆದ 40 ವರ್ಷಗಳಿಂದ ಆಕೆ ಯೋಗಾಭ್ಯಾಸ ಮಾಡುತ್ತಿದ್ದಾರೆ. ಯೋಗದ ಲಾಭದಿಂದಲೇ ಶತವರ್ಷ ಬದುಕಿದ್ದಾರೆ ಮತ್ತು ಈಗಲೂ ಆರೋಗ್ಯಯುತವಾಗಿದ್ದಾರೆ ಎಂದು ಯೋಗದ ಮಹತ್ವವನ್ನು ಪ್ರಧಾನಿ ಮೋದಿ ನೆನಪಿಸಿದರು.

    ಭಾರತಕ್ಕೆ ಮರಳಿದ ಕಲಾಕೃತಿಗಳು 

    ಅಮೆರಿಕವು 100 ಕ್ಕೂ ಹೆಚ್ಚು ಅಪರೂಪದ ಮತ್ತು ಪ್ರಾಚೀನ ಕಲಾಕೃತಿಗಳನ್ನು ನಮಗೆ ಹಿಂದಿರುಗಿಸಿದೆ. ಭಾರತಕ್ಕೆ ಮರಳಿದ ಈ ಕಲಾಕೃತಿಗಳು 250 ರಿಂದ 2500 ವರ್ಷಗಳಷ್ಟು ಹಳೆಯವು. ಈ ಅಪರೂಪದ ವಸ್ತುಗಳು ದೇಶದ ವಿವಿಧ ಪ್ರದೇಶಗಳಿಗೆ ಸೇರಿವೆ. ಈ ಅಮೂಲ್ಯ ಪರಂಪರೆಯನ್ನು ನಮಗೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಮೆರಿಕ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. 2016 ಮತ್ತು 2021ರಲ್ಲಿ ನಾನು ಅಮೆರಿಕಕ್ಕೆ ಭೇಟಿ ನೀಡಿದಾಗಲೂ ಹಲವು ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು ಎಂದರು.

    ಮುಸ್ಲಿಂ ಮಹಿಳೆಯರಿಂದ ಪತ್ರ

    ಇತ್ತೀಚೆಗೆ ‘ಹಜ್’ ಮುಗಿಸಿ ಹಿಂದಿರುಗಿದ ಮುಸ್ಲಿಂ ಮಹಿಳೆಯರಿಂದ ನನಗೆ ಸಾಕಷ್ಟು ಸಂಖ್ಯೆಯಲ್ಲಿ ಪತ್ರಗಳು ಬಂದಿವೆ. ಈ ಮಹಿಳೆಯರು ಯಾವುದೇ ಪುರುಷ ಸಂಗಾತಿ ಇಲ್ಲದೆ ಹಜ್ ಯಾತ್ರೆ ಮಾಡಿದ್ದಾರೆ. ಯಾತ್ರೆ ಮಾಡಿದವರ ಸಂಖ್ಯೆ ಕೇವಲ 50 ಅಥವಾ 100 ಅಲ್ಲ. ಆದರೆ 4,000 ಕ್ಕಿಂತ ಹೆಚ್ಚು. ಇದು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ಯಾವುದೇ ಪುರುಷ ಸಂಗಾತಿ ಇಲ್ಲದೆ ಹಜ್ ಯಾತ್ರೆ ಮಾಡಲು ಅವಕಾಶವಿರಲಿಲ್ಲ ಎಂದು ಹೇಳಿದರು. (ಏಜೆನ್ಸೀಸ್​)

    ಕಾಶ್ಮೀರದಲ್ಲಿ ಭಾರತೀಯ ಯೋಧ ನಾಪತ್ತೆ; ಕಾರಿನಲ್ಲಿ ರಕ್ತ ಪತ್ತೆ!

    ಟ್ರ್ಯಾಕ್ಟರ್​​ನಡಿ ಸಿಲುಕಿ ಬಾಲಕ ಮೃತ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಅಪ್ರಾಪ್ತ ವಯಸ್ಸಿನ ಚಾಲಕನ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts