More

    ಬಿಗ್​​ಬಾಸ್​ ಸೀಸನ್​ 8: ಲ್ಯಾಗ್​ ಮಂಜು ಗೆಲುವಿಗೆ ಕಾರಣವಾದ ಮುಖ್ಯ ಅಂಶಗಳಿವು….

    ಬೆಂಗಳೂರು: ಮಹಾಮಾರಿ ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲೇ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿಗೆ ವರ್ಣರಂಜಿತ ತೆರೆಬಿದ್ದಿದ್ದು, ಮಜಾಭಾರತದ ಲ್ಯಾಗ್​ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅರವಿಂದ್​ ಕೆಪಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

    ಮಂಜು ಗೆಲುವಿಗೆ ಕಾರಣವಾದ ಅಂಶಗಳು ಯಾವುವೆಂದರೆ ನೋಡಿದರೆ, ಇಡೀ ಸೀಸನ್​ನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಯಾರಾದರೂ ಜನರನ್ನು ಹೆಚ್ಚು ನಗಿಸಿದ್ದಾರೆಂದರೆ ಮೊದಲ ಸ್ಥಾನದಲ್ಲಿ ಮಂಜು ಪಾವಗಡ ನಿಲ್ಲುತ್ತಾರೆ. ಟಾಸ್ಕ್​ ವಿಚಾರ ಬಂದಾಗಲೂ ಕೂಡ ಮಂಜು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲೇ ಕಲರ್ಸ್​ ಕನ್ನಡದ ಮಜಾ ಭಾರತ, ಕಾಮಿಡಿ ಕಿಲಾಡಿಗಳು ಮತ್ತು ಕೆಲವೊಂದು ಚಿತ್ರಗಳಲ್ಲಿ ನಟಿಸಿರುವ ಮಂಜು ನಗೆ ಸಾಗರವನ್ನೇ ಹರಿಸಿದ್ದು, ತುಂಬಾ ಜನಮನ್ನಣೆ ಗಳಿಸಿದ್ದಾರೆ. ಅಲ್ಲದೆ, ಮಂಜು ಪಾವಗಡ ಹಳ್ಳಿಯ ಹಿನ್ನೆಲೆಯುಳ್ಳು ಪ್ರತಿಭೆ ಹಾಗೂ ತುಂಬಾ ಶ್ರಮದಿಂದ ಬೆಳೆದು ಬಂದಂತಹ ವ್ಯಕ್ತಿಯಾಗಿರುವುದರಿಂದ ಸಹಜವಾಗಿಯೇ ಜನರಿಗೆ ಮಂಜು ಮೇಲೆ ಅನುಕಂಪ ಮೂಡಿದೆ.

    ಇಷ್ಟೇ ಅಲ್ಲದೆ, ಮಂಜುಗೆ ಬಿಗ್​ಬಾಸ್​ ಮನೆಯೊಳಗೆ ಬಹುತೇಕ ಸ್ಪರ್ಧಿಗಳ ಬೆಂಬಲವೂ ಇತ್ತು. ಮಜಾ ಭಾರತದ ತಂಡವೂ ಕೂಡ ಮಂಜು ಪರ ಮತಯಾಚಿಸಿದ್ದಾರೆ. ಬಿಗ್​ಬಾಸ್​ ಅನೇಕ ಸ್ಪರ್ಧಿಗಳು ಕೂಡ ಮಂಜು ಪರ ಬ್ಯಾಟ್​ ಬೀಸಿದರು. ಇಷ್ಟೇ ಅಲ್ಲದೆ, ಬಹುದೊಡ್ಡ ಶಕ್ತಿ ಎನ್ನುವಂತೆ ಕರುನಾಡ ಚಕ್ರವರ್ತಿ ಶಿವಣ್ಣ ಮಂಜು ಪರ ಬ್ಯಾಟ್​ ಬೀಸಿರುವುದು ಬಹುದೊಡ್ಡ ಲಾಭವಾಗಿ ಪರಿಣಮಿಸಿದೆ. ಹೀಗಾಗಿ ಈ ಎಲ್ಲ ಅಂಶಗಳಿಂದ ಮಂಜು ಕಡೆ ಒಲವು ಜಾಸ್ತಿಯಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗಿದೆ.

    ಬಿಗ್​​ಬಾಸ್​ ಸೀಸನ್​ 8ರ ಟ್ರೋಫಿಗೆ ಮುತ್ತಿಟ್ಟ ಲ್ಯಾಗ್​ ಮಂಜು: ಅರವಿಂದ್​ ಕೆಪಿ ರನ್ನರ್​ಅಪ್​..!

    ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ

    ಸಿನಿಮಾನೇ ಉಸಿರು; ಪ್ರಜಾಕೀಯ ಜತೆಜತೆಗೇ ಸಾಗುತ್ತದೆ: ರಿಯಲ್​ ಸ್ಟಾರ್ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts