More

    PHOTO | ಪತ್ನಿ ಜನ್ಮದಿನಕ್ಕೆ ಮನೀಷ್ ಪಾಂಡೆ ವಿಶೇಷ ಶುಭಾಶಯ

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರಂತೆ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚಟುವಟಿಕೆ ಹೊಂದಿಲ್ಲ. ಅಪರೂಪಕ್ಕೊಮ್ಮೆ ಮಾತ್ರ ಮನೀಷ್ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 2 ದಿನಗಳ ಹಿಂದೆ ಮನೀಷ್ ಪಾಂಡೆ ಪೋಸ್ಟ್ ಒಂದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದರು. ಇದಕ್ಕೆ ಕಾರಣ ಅವರ ಪತ್ನಿ ಆಶ್ರಿತಾ ಶೆಟ್ಟಿ ಅವರ ಜನ್ಮದಿನ. ಪತ್ನಿಯ ಜನ್ಮದಿನಕ್ಕೆ ವಿಶೇಷ ಸಂದೇಶವೊಂದನ್ನು ಮನೀಷ್ ಪಾಂಡೆ ಪ್ರಕಟಿಸಿದ್ದಾರೆ.

    ‘ನಿನ್ನೊಂದಿಗೆ ಕಳೆಯುತ್ತಿರುವ ಜೀವನ ಪ್ರತಿದಿನ ಮತ್ತಷ್ಟು ಉತ್ತಮವಾಗುತ್ತಿದೆ. ಹ್ಯಾಪಿ ಬರ್ತ್‌ಡೇ ಲವ್ ಆಶ್ರಿತಾ ಶೆಟ್ಟಿ’ ಎಂದು ಮನೀಷ್ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿ ಗುರುವಾರ 27ನೇ ಜನ್ಮದಿನ ಆಚರಿಸಿಕೊಂಡರು. ಈ ವೇಳೆ ಪತಿ ಮನೀಷ್ ಪಾಂಡೆ ಜತೆಗೆ ಕೇಕ್ ಕತ್ತರಿಸಿ ಜನ್ಮದಿನದ ಸಂಭ್ರಮ ಆಚರಿಸಿಕೊಂಡಿರುವ ಚಿತ್ರಗಳನ್ನು ಆಶ್ರಿತಾ ಶೆಟ್ಟಿ ಕೂಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ಆಶ್ರಿತಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಲ್ಲಿರುವ ವೇಳೆ, ಮನೀಷ್ ಪಾಂಡೆ ಅವರ ಅಭಿಮಾನಿಗಳು, ‘ಅಣ್ಣ ಎಲ್ಲಿದ್ದಾರೆ ಕಾಣಿಸ್ತಿಲ್ಲ ಅತ್ತಿಗೆ’ ಎಂಬ ಕಮೆಂಟ್‌ಗಳನ್ನು ಹಾಕಿದ್ದರು.

    ಇದನ್ನೂ ಓದಿ: ಮಹಿಳಾ ಕ್ರಿಕೆಟ್​ ತಾರೆ ಸ್ಮೃತಿ ಮಂದನಾಗೆ 24ನೇ ಜನ್ಮದಿನದ ಸಂಭ್ರಮ

    PHOTO | ಪತ್ನಿ ಜನ್ಮದಿನಕ್ಕೆ ಮನೀಷ್ ಪಾಂಡೆ ವಿಶೇಷ ಶುಭಾಶಯ

    ಮನೀಷ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಅವರ ವಿವಾಹ ಕಳೆದ ವರ್ಷ ಡಿಸೆಂಬರ್ 2ರಂದು ಮುಂಬೈನಲ್ಲಿ ನಡೆದಿತ್ತು. 30 ವರ್ಷದ ಮನೀಷ್ ಪಾಂಡೆ ಭಾರತ ಪರ 26 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ಕರ್ನಾಟಕ ತಂಡಕ್ಕೆ ನಾಯಕರೂ ಆಗಿದ್ದಾರೆ. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಮನೀಷ್ ಪಾಂಡೆ, ಹಾಲಿ ಸನ್‌ರೈಸರ್ಸ್‌ ತಂಡದ ಆಟಗಾರರಾಗಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಆಶ್ರಿತಾ ಶೆಟ್ಟಿ ತುಳು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಂಬಿಎ ಪದವಿ ಪಡೆದಿರುವ ಆಶ್ರಿತಾ, ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts