More

    ಹಣಕ್ಕಾಗಿ ಬೆದರಿಕೆ ಪತ್ರ ಕಳುಹಿಸಿದ್ದ ಮಣಿಪುರ ಮೂಲದ ಮೂವರ ಸೆರೆ

    ಬೆಂಗಳೂರು: ಮಣಿಪುರದ ಬ್ಯಾಂಕ್ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಹಣಕ್ಕಾಗಿ ಬೆದರಿಕೆ ಪತ್ರ ಕಳುಹಿಸಿ, ಮೊಬೈಲ್ ಕರೆ ಮಾಡಿ ಬೆದರಿಸುತ್ತಿದ್ದ ಮಣಿಪುರದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮಣಿಪುರ ಮೂಲದ ಸಾರಂಗ್​ಥೆಮ್ ಜ್ಞಾನೇಶ್ವರ ಸಿಂಗ್ ಅಲಿಯಾಸ್ ಗೋಪಿ (45), ಲೈರೆನ್ ಲಕ್ಪಂ ಮನಿಹಾರ್ ಸಿಂಗ್ (47), ತಂಗ್ಜಮ್ ನಂದಕಿಶೋರ್ ಸಿನ್ಹಾ (35) ಬಂಧಿತರು.

    ಮಣಿಪಾಲ್ ಕಂಗ್ಲೆಪಾಕ್ ಕಮ್ಯೂನಿಸ್ಟ್ ಪಾರ್ಟಿಯ (ಅಂಗಾಂಬಾ ಗ್ರೂಪ್) ಆರ್ಥಿಕ ಕಾರ್ಯದರ್ಶಿ ಪಾರಿ ಮೈಥೈ ಎಂಬುವರ ಹೆಸರಿನಲ್ಲಿ ಮಣಿಪುರ ಬ್ಯಾಂಕುಗಳ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಆರೋಪಿಗಳು ಹಣ ನೀಡುವಂತೆ ಬೆದರಿಕೆ ಕರೆ ಮಾಡುತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸದಿದ್ದರೆ ಬೆದರಿಕೆ ಪತ್ರ ಕಳುಹಿಸಿ ಜೀವ ಬೆದರಿಕೆ ಹಾಕುತ್ತಿದ್ದರು. ಈ ಮೂವರು ಆರೋಪಿಗಳ ವಿರುದ್ಧ ಮಣಿಪುರ ಇಂಫಾಲ್ ಪಶ್ಚಿಮ ಜಿಲ್ಲಾ ನಗರ ಠಾಣೆಯಲ್ಲಿ ಫೆ.15ರಂದು ದೂರು ದಾಖಲಾಗಿತ್ತು. ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ಸುಳಿವು ಸಿಕ್ಕಿತು.

    ಮಣಿಪುರ ಪೊಲೀಸರು ಈ ಬಗ್ಗೆ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರು ವುದನ್ನು ಖಚಿತಪಡಿಸಿಕೊಂಡು ಬಂಧಿಸಿದ್ದರು. ಸದ್ಯ ಆರೋಪಿಗಳನ್ನು ಮಣಿಪುರ ಪೊಲೀಸರ ವಶಕ್ಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts