More

    ಮಣಿಪುರ ದೌರ್ಜನ್ಯದ ನ್ಯಾಯಾಂಗ ತನಿಖೆಯಾಗಲಿ

    ಹಟ್ಟಿಚಿನ್ನದಗಣಿ: ಮಣಿಪುರದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕ್ಯಾಂಪ್ ಬಸ್ ನಿಲ್ದಾಣದ ಬಳಿ ಎಐಟಿಯುಸಿ ಸ್ಥಳೀಯ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಕಾರ್ಯದರ್ಶಿ ವೆಂಕೋಬ್ ಮಿಯ್ಯಪೂರ್ ಮಾತನಾಡಿ, ಮಣಿಪುರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯದಂಥಹ ಪೈಶಾಚಿಕ ಕೃತ್ಯಗಳ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಣಿಪುರ ಸರ್ಕಾರವನ್ನು ಕೂಡಲೇ ವಿಸರ್ಜಿಸಬೇಕೆಂದು ಒತ್ತಾಯಿಸಿದರು.

    ಮಣಿಪುರದಲ್ಲಿ 160ಕ್ಕೂ ಹೆಚ್ಚು ಜನಾಂಗೀಯ ಹಿಂಸೆಗಳಾಗಿದ್ದರೂ, ಸಾರ್ವಜನಿಕರಿಗೆ ರಕ್ಷಣೆ ಕೊಡುವಲ್ಲಿ ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರದಂಥ ಹೇಯ ಕೃತ್ಯಗಳು ನಡೆದರೂ ಅಲ್ಲಿನ ಸಿಎಂ ಹೇಳಿಕೆ ಬಾಲಿಶತನದಿಂದ ಕೂಡಿದೆ. ದೇಶದ ಆಡಳಿತ ವ್ಯವಸ್ಥೆಯೂ ತಲೆತಗ್ಗಿಸುವಂತಾಗಿದೆ ಎಂದು ದೂರಿದರು.

    ಸರ್ಕಾರದ ವಿರುದ್ಧ ರಾಷ್ಟ್ರಪತಿ ಕ್ರಮಕೈಗೊಂಡು, ಕುಕಿ, ನಾಗಾ ಬುಡಕಟ್ಟು ಜನರಿಗೆ ರಕ್ಷಣೆ ಒದಗಿಸಿ, ಶಾಂತಿ ಮರುಸ್ಥಾಪಿಸಬೇಕು. ಈ ಮೂಲಕ ಪ್ರಜಾಪ್ರಭುತ್ವ ಕಾಪಾಡಲು ಕ್ರಮವಹಿಸಬೇಕೆಂದು ವೆಂಕೋಬ್ ಮಿಯ್ಯಪೂರ್ ಒತ್ತಾಯಿಸಿದರು. ರಾಷ್ಟ್ರಪತಿಗೆ ಬರೆದ ಹಕ್ಕೊತ್ತಾಯದ ಪತ್ರವನ್ನು ಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಯೇಸಪ್ಪಗೆ ಸಲ್ಲಿಸಲಾಯಿತು.

    ಕಾರ್ಮಿಕ ಸಂಘದ ಪ್ರತಿನಿಧಿಗಳಾದ ಯಲ್ಲಪ್ಪ ಗುರುಗುಂಟಕರ್, ಹುಸೇನ್ ಬಾಷಾ, ನಾಗರೆಡ್ಡಿ ಜೇರಬಂಡಿ, ಮೈನುದ್ದೀನ್, ದುರುಗಪ್ಪ, ಸೋಮಣ್ಣ, ಕನಕರಾಜ್‌ಗೌಡ ಗುರೀಕಾರ್, ಹನುಮಂತಗೌಡ ಗುರೀಕಾರ್, ಪ್ರಮುಖರಾದ ಸಂಗಯ್ಯಸ್ವಾಮಿ ಚಿಂಚರಕಿ, ಕುಪ್ಪಣ್ಣ ಹೊಸಮನಿ, ಬಸವರಾಜ್ ನಗನೂರು, ಬಾಬೂ ಭೂಪೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts