More

    ಮ್ಯಾಂಗೋ ರೇಟ್ ಗಗನಮುಖಿ

    ಲಕ್ಷ್ಮೇಶ್ವರ: ಮ್ಯಾಂಗೋ ರೇಟ್ ಗಗನಮುಖಿಯಾಗಿದೆ. ಆದರೆ, ದರ ಕೇಳಿದರೆ ಆಗುತ್ತಿದೆ ಕಷ್ಟ.

    ಹಬ್ಬಕ್ಕೆ ಬಹುತೇಕರು ಮೊದಲ ಮಾವಿನ ಸಿಹಿ ಸವಿಯುತ್ತಾರೆ. ಮುಖ್ಯವಾಗಿ ಗೃಹ ಪ್ರವೇಶ, ಸೀಮಂತ ಹಾಗೂ ಇತರ ವಿಶೇಷ ಕಾರ್ಯಕ್ರಮ, ಬೀಗರೂಟಕ್ಕೆ ಮಾವಿನ ಸೀಕರಣೆ ಮಾಡಲಾಗುತ್ತದೆ. ಆದರೆ, ಬೆಲೆ ಹೆಚ್ಚಳದಿಂದ ಮಾವಿನ ಸಿಹಿ ಸವಿಯಲು ಹಿಂದೇಟು ಹಾಕಿ, ಮುಂದೆ ದರ ಕಡಿಮೆಯಾದರೆ ಹಣ್ಣು ತಿಂದರಾಯಿತು ಎನ್ನುವಂತಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಮಾವಿನ ಹಣ್ಣಿನ ಬೆಲೆ ಡಜನ್‌ಗೆ 600 ರೂ. ವರೆಗೆ ಇದೆ. ಈ ಬೆಲೆ ಬಡವರ ಪಾಲಿಗೆ ಕಹಿ ಅನುಭವ ನೀಡುತ್ತಿದೆ. ಹಣ್ಣುಗಳ ರಾಜನ ಸಹವಾಸಕ್ಕೆ ಹೋಗುವುದೇ ಬೇಡ ಎನ್ನುವಂತಾಗಿದೆ.

    ಸ್ಥಳೀಯ ಮಾವು ಬೆಳೆಗಾರರರು ಬೆಳೆ ನಷ್ಟ ಅನುಭವಿಸಿದ್ದಾರೆ. ಅಳಿದುಳಿದ ಬೆಳೆ ಉಳಿಸಿ ನೈಸರ್ಗಿಕವಾಗಿ ಹಣ್ಣು ಮಾಗಿಸಲು ಮುಂದಾಗಿದ್ದು ಮಾರುಕಟ್ಟೆಗೆ ಬರಲು ಇನ್ನಷ್ಟು ತಡವಾಗುತ್ತದೆ. ವ್ಯಾಪಾರಸ್ಥರು ಲಕ್ಷಾಂತರ ರೂ. ಬಂಡವಾಳ ಹಾಕಿ ಮಹಾನಗರಗಳ ಮಾರುಕಟ್ಟೆಗಳಿಂದ ಹಣ್ಣು ಖರೀದಿಸಿ ವ್ಯಾಪಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

    ಇಳುವರಿ ಕುಸಿತ: ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿದು ಮಾವಿನ ಹಣ್ಣಿಗೆ ಬಂಗಾರದ ಬೆಲೆ ಬಂದಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಡಜನ್ ಹಣ್ಣು ಖರೀದಿಸಲು 800 ರೂ.ದಿಂದ 1,000 ರೂ. ಕೊಡಬೇಕಿದೆ. ಮಕ್ಕಳು ಗೋಗರೆದರೂ ಕೊಡಿಸುವ ಶಕ್ತಿ ನಮ್ಮಂತಹ ಬಡವರಿಗೆ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಪಟ್ಟಣದ ನಿವಾಸಿ ನೀಲಮ್ಮ ಮೇಟಿ.

    ಅಕಾಲಿಕ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಮಾವಿನ ಗಿಡಗಳು ಹೂವು ಬಿಡುವುದು ತಡವಾಯಿತು. ಹೂವು ಬಿಟ್ಟ ವೇಳೆಯಲ್ಲೂ ಮಳೆ, ಇಬ್ಬನಿ, ಬೂದುರೋಗ, ರಸಹೀರುವ ಕೀಟ, ಜಿಗಿ, ಚಿಬ್ಬುರೋಗದಿಂದ ಇಳುವರಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಆಪೂಸ್, ಕೇಸರ, ತೋತಾಪುರಿ, ಅಮ್ರಪಾಲಿ, ಮಲ್ಲಿಕಾ, ರತ್ನಗಿರಿ, ಬಾದಾಮಿ, ಮಲಗೋಬಾ ಹಣ್ಣು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಶಿರಹಟ್ಟಿ ತಾಲೂಕು ಸೇರಿ ಅಂದಾಜು 3,00 ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಇಳುವರಿ ಕುಸಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಿದೆ.

    ಸುರೇಶ ಕುಂಬಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ, ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts