More

    ತುಳುವಿಗೂ ಎಂಟ್ರಿ ಕೊಟ್ಟ ಮಂಗ್ಲಿ … ‘ಬಿರ್ದ್‌ದ ಕಂಬಳ’ ಚಿತ್ರಕ್ಕೆ ಗಾಯನ

    ಬೆಂಗಳೂರು: ಗಾಯಕಿ ಮಂಗ್ಲಿ ಕಳೆದೊಂದು ವರ್ಷದಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರು, ಚಂದ್ರಚೂಡ್​ ನಿರ್ದೇಶನದ, ನಾಗಶೇಖರ್​ ನಾಯಕನಾಗಿ ಅಭಿನಯಿಸುತ್ತಿರವ ‘ಪಾದರಾಯ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಅವರು ತುಳು ಚಿತ್ರವೊಂದಕ್ಕೆ ಧ್ವನಿಯಾಗಿದ್ದಾರೆ.

    ಇದನ್ನೂ ಓದಿ: ಪತ್ತೇದಾರಿಯಾದ ವಿಜಯ್​ ದೇವರಕೊಂಡ; ವಿ12 ಚಿತ್ರದ ಪೋಸ್ಟರ್​ ಬಿಡುಗಡೆ

    ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರು ‘ವೀರ ಕಂಬಳ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಈ ಚಿತ್ರವು ತುಳುವಿನಲ್ಲೂ ‘ಬಿರ್ದ್‌ದ ಕಂಬಳ’ ಎಂಬ ಹೆಸರಿನಲ್ಲಿ ತುಳುವಿಗೆ ಡಬ್​ ಆಗುತ್ತಿದೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಮಂಗ್ಲಿ ಒಂದು ಹಾಡನ್ನು ಹಾಡಿದ್ದಾರೆ. ಕನ್ನಡದ ಹಾಡಿಗೆ ರಘು ಶಾಸ್ತ್ರಿ ಸಾಹಿತ್ಯ ರಚಿಸಿದರೆ, ತುಳು ಹಾಡಿಗೆ ಕೆ.ಕೆ. ಪೇಜಾವರ ಗೀತರಚನೆ ಮಾಡಿದ್ದಾರೆ. ಮಣಿಕಾಂತ್​ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

    ಎ.ಆರ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅರುಣ್ ರೈ ತೋಡಾರ್ ನಿರ್ಮಿಸಿ, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿರುವ ‘ವೀರ ಕಂಬಳ’ ಚಿತ್ರವು ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಸುತ್ತ ಸುತ್ತುತ್ತದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿರದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ನಡೆದಿದೆ.

    ಇದನ್ನೂ ಓದಿ: ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ‘ಪಠಾಣ್​’ ಟ್ರೈಲರ್​

    ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾದ ಶ್ರೀನಿವಾಸ ಗೌಡ ಹಾಗೂ ‘ಕಾಂತಾರ’ ಖ್ಯಾತಿಯ ಸ್ವರಾಜ್ ಶೆಟ್ಟಿ, ಆದಿತ್ಯ, ನವೀನ್ ಡಿ ಪಡಿಲ್, ಬೋಜರಾಜ ವಾಮಂಜೂರು, ಉಷಾ ಭಂಡಾರಿ ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯಕುಮಾರ್​ ಕೊಕಡಿಯಾಲ್​ಬೈಲ್​ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗಿರಿ ಅವರ ಛಾಯಾಗ್ರಹಣವಿದೆ.

    ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ ಶ್ರುತಿ ಹಾಸನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts