More

  ಮಾಂಗಲ್ಯ ಸರ ದೋಚಿದ್ದ ಇಬ್ಬರು ಕಳ್ಳರ ಬಂಧನ

  ಮೂಡಲಗಿ: ಮಹಿಳೆ ಕೊರಳಿನಲ್ಲಿದ್ದ 1.25 ಲಕ್ಷ ರೂ. ಮೌಲ್ಯದ ಬಂಗಾರದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಮೂಡಲಗಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದು, ಆಭರಣ ವಶಕ್ಕೆ ಪಡೆದಿದ್ದಾರೆ.

  ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಅಮಿತ ಸಿದ್ರಾಮಗೋಳ (20) ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಮಾರಾಪುರ ಗ್ರಾಮದ ಆನಂದ ಮೇತ್ರೆ (23) ಎಂಬುವರನ್ನು ಬಂಧಿಸಿ, ಕಳ್ಳತನ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

  ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ, ಸೆ. 13ರಂದು ಪತಿಯೊಂದಿಗೆ ಬೈಕ್ ಮೇಲೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ತೆರಳುವಾಗ ಕಳ್ಳರು ಮಾರ್ಗಮಧ್ಯೆ ಸರ ದೋಚಿದ್ದರು. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts