More

  ಸೆಂಟ್ರಲ್ ಮಾರ್ಕೆಟ್ ಮತ್ತೆ ಗೊಂದಲ

  ಮಂಗಳೂರು: ಸೆಂಟ್ರಲ್ ಮಾರ್ಕೆಟ್‌ನಲ್ಲಿ ವರ್ತಕರಿಗೆ ವ್ಯಾಪಾರ ಮಾಡುವುದಕ್ಕೆ ನಿರ್ಬಂಧ ಹೇರಿರುವ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದೆ.
  ಒಟ್ಟು ಪ್ರತ್ಯೇಕ ನಾಲ್ಕು ದಾವೆಗಳು ಹೈಕೋರ್ಟ್‌ನಲ್ಲಿದ್ದು, ಒಂದು ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯವರು 2020 ಏ.7ರಂದು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆ ಕ್ರಮಬದ್ಧವಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಆ ಹಿನ್ನೆಲೆಯಲ್ಲಿ ಮಂಗಳವಾರ ಮನಪಾ ಆಯುಕ್ತರು ಆ ಪ್ರಕಟಣೆ ಹಿಂಪಡೆದಿದ್ದಾರೆ.
  ಆದರೆ ಇದರ ಬದಲು ಕ್ರಮಬದ್ಧವಾದ ಇನ್ನೊಂದು ಸಾರ್ವಜನಿಕ ಪ್ರಕಟಣೆ ಹೊರಡಿಸುವುದಕ್ಕೆ ಮನಪಾ ಮುಂದಾಗಿದೆ. ಪ್ರಕಟಣೆ ಹಿಂಪಡೆದಿರುವುದು ಯಾವುದೇ ವರ್ತಕರಿಗೆ ಅಲ್ಲಿ ವ್ಯಾಪಾರ ಶುರುಮಾಡಲು ಅನುಮತಿಯಲ್ಲ ಎಂದು ಮನಪಾ ಅಧಿಕಾರಿಗಳು ತಿಳಿಸಿದ್ದಾರೆ. ಆ.13ರಂದೂ ವಿಚಾರಣೆ ಹೈಕೋರ್ಟ್‌ನಲ್ಲಿ ಮುಂದುವರಿಯಲಿದ್ದು ಸ್ಪಷ್ಟ ನಿರ್ಣಯ ಸಿಗುವ ಸಾಧ್ಯತೆ ಇದೆ.

  ಅಂಗಡಿ ಮುಚ್ಚಿಸಿದ ಅಧಿಕಾರಿಗಳು
  ಮನಪಾ ಹೈಕೋರ್ಟ್‌ನಲ್ಲಿ ಕೇಸ್ ಹಿಂಪಡೆದಿದೆ ಎಂಬ ತಪ್ಪು ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಕೆಲವು ವ್ಯಾಪಾರಿಗಳು ಬುಧವಾರ ಅಂಗಡಿ ತೆರೆದಿದ್ದರು. ಆದರೆ ಅವರಿಗೆ ಮನಪಾ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ಬಳಿಕ ಅಂಗಡಿ ಮುಚ್ಚಿದ್ದಾರೆ. ಎಲ್ಲ ವರ್ತಕರೂ 13ರಂದು ಬನ್ನಿ, ಮನಪಾ ನೋಟಿಸ್ ಹಿಂಪಡೆದಿದೆ ಎಂಬ ವರ್ತಕರೊಬ್ಬರ ಧ್ವನಿ ಕ್ಲಿಪ್ಪಿಂಗ್ ಕೂಡ ವಾಟ್ಸಾೃಪ್‌ನಲ್ಲಿ ಹರಿದಾಡುತ್ತಿದೆ.

  ಹೊಸ ಕಟ್ಟಡಕ್ಕೆ ಟೆಂಡರ್ ಅಂತಿಮ
  ಮಂಗಳೂರು ಸೆಂಟ್ರಲ್ ಮಾರ್ಕೆಟ್ ಹಳೇ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಹೊಸ ಮಾರ್ಕೆಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮಂಗಳೂರು ಸ್ಮಾರ್ಟ್ ಸಿಟಿಯವರು ಮುಂದಾಗಿದ್ದು, ಅದಕ್ಕೆ ಟೆಂಡರ್ ಕೂಡ ಅಂತಿಮಗೊಂಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts