More

    ಒಂದೇ ದಿನ 32 ಮಿ.ಮೀ ಮಳೆ

    ಮಂಡ್ಯ: ಮುಂಗಾರು ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ವರುಣನ ಅಬ್ಬರ ಪ್ರಾರಂಭವಾಗಿದೆ. ಭಾನುವಾರ ಒಂದೇ ದಿನ ಜಿಲ್ಲಾದ್ಯಂತ 32 ಮಿ.ಮೀ ಮಳೆಯಾಗಿದೆ. ಅಂತೆಯೇ, ಕೆ.ಆರ್.ಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಸಿಡಿಲು ಬಡಿದು ಪಾಪಣ್ಣ(60) ಮೃತಪಟ್ಟಿದ್ದಾರೆ. ಇವರ ಮೊಮ್ಮಗಳು, ಅಳಿಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣದಂತಾಗಿ ಮಳೆ ಪ್ರಾರಂಭವಾಯಿತು. ಸಣ್ಣ ಪ್ರಮಾಣದಲ್ಲಿ ಶುರುವಾದ ಮಳೆ ಕೆಲವೊತ್ತಿನ ಬಳಿಕ ಜೋರಾಗಿತು. ಕೆಲವೆಡೆ ರಾತ್ರಿಯಿಡಿ ಮಳೆಯಾಗಿದೆ. ಅಂತೆಯೇ, ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು.

    ಇನ್ನು ಕೆಲವೆಡೆ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಪಾಂಡವಪುರ ತಾಲೂಕಿನ ಮಾಡ್ರಹಳ್ಳಿ, ದೊಡ್ಡಬ್ಯಾಡರಹಳ್ಳಿ, ಮಹದೇಶ್ವರಪುರ, ಹಿರೇಮರಳಿ ಸೇರಿದಂತೆ ಕೆಲವೆಡೆ ವಿದ್ಯುತ್ ಕಂಬ ಧರೆಗುರುಳಿವೆ. ಅಂತೆಯೇ, ಮದ್ದೂರು ತಾಲೂಕಿನ ಸೋಮನಹಳ್ಳಿ ಭಾಗದಲ್ಲಿ ಸಾವಿರಾರೂ ಮೌಲ್ಯದ ಬಾಳೆ ಬೆಳೆ ನಷ್ಟವಾಗಿದೆ. ಇದಲ್ಲದೆ, ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೆಂಗಿನ ಸಸಿ ನೆಡಲು ಸಿದ್ಧತೆ ಮಾಡಿಕೊಂಡಿದ್ದವರಿಗೆ ಸಮಸ್ಯೆಯಾಗಿದೆ.

    ಪಾಂಡವಪುರ ತಾಲೂಕಿನ 56.1 ಮಿ.ಮೀ ಮಳೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 54.7 ಮಿ.ಮೀ, ಮಂಡ್ಯದಲ್ಲಿ 39.6 ಮಿ.ಮೀ, ಮದ್ದೂರಿನಲ್ಲಿ 35.6 ಮಿ.ಮೀ, ಕೆ.ಆರ್.ಪೇಟೆಯಲ್ಲಿ 24.5 ಮಿ.ಮೀ, ಮಳವಳ್ಳಿಯಲ್ಲಿ 21.2 ಮಿ.ಮೀ ಮತ್ತು ನಾಗಮಂಗಲ ತಾಲೂಕಿನಲ್ಲಿ 19 ಮಿ.ಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts