More

    ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: ಮಂಡ್ಯ ಮೂಲದ ದೀಪಕ್​ ಗೌಡ ಬಂಧನ

    ವಿಜಯನಗರ: ದಕ್ಷಿಣ ಕಾಶಿ ಹಂಪಿಯಲ್ಲಿ ಮೋಜು ಮಸ್ತಿ ಜೊತೆಗೆ ಹಂಪಿ ಸ್ಮಾರಕಗಳ ಮೇಲೆ ಡಾನ್ಸ್​ ಮಾಡಿ ವಿವಾದ ಸೃಷ್ಟಿಸಿದ್ದ ಮಂಡ್ಯ ಮೂಲದ ದೀಪಕ್ ಗೌಡನನ್ನು ಹಂಪಿ ಪ್ರವಾಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ದೀಪಕ್​ ಗೌಡ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಮೇಲೆ ಹತ್ತಿ ನೃತ್ಯ ಮಾಡಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ. ಈ ವಿಡಿಯೋ ವೈರಲ್​ ಆಗಿತ್ತು. ಈ ಬಗ್ಗೆ ದಿಗ್ವಿಜಯ ನ್ಯೂಸ್ ವರದಿ ಮಾಡಿತ್ತು. ಸ್ಮಾರಕಗಳಿಗೆ ಸಂರಕ್ಷಣೆ ಇಲ್ಲ, ಹಂಪಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ ಅಂತ ಸುದ್ದಿ ಬಿತ್ತರಿಸಿತ್ತು.

    ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ವಿಜಯನಗರ ಜಿಲ್ಲಾಡಳಿತ ಅಲರ್ಟ್ ಆಗಿತ್ತು. ಈ ಸಂಬಂಧ ದೀಪಕ್ ಗೌಡ ಮೇಲೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹುಡುಕಾಟ ನಡೆಸಿ, ಇದೀಗ ಬಂಧನ ಮಾಡಿದ್ದಾರೆ.

    ಇದನ್ನೂ ಓದಿ: ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

    ಇದಕ್ಕೂ ಮುನ್ನ ತನ್ನ ವಿರುದ್ಧ ಎಫ್​ಐಆರ್​ ದಾಖಲಾಗುತ್ತಿದ್ದಂತೆ ಇತ್ತ ದೀಪಕ್​ ಗೌಡ ಕ್ಷಮೆಯಾಚಿಸಿದ್ದ. ನಾನು ಹಳ್ಳಿ ಹುಡುಗ. ನನಗೆ ಗೊತ್ತಿಲ್ಲದೆ ವಿಡಿಯೋ ಪೋಸ್ಟ್​ ಮಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದ. ವಿಶ್ವ ಪಾರಂಪರಿಕ ತಾಣ ಆಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೀಪಕ್​ ಗೌಡನನ್ನು ಬಂಧಿಸಲಾಗಿದೆ. ಈ ಮೂಲಕ ಇನ್ನಿತರರಿಗೆ ಕಠಿಣ ಸಂದೇಶ ರವಾನೆಯಾದಂತಿದೆ.

    ಪಾರಂಪರಿಕ ಕಟ್ಟಡಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಬಿಟ್ಟು ಸ್ಮಾರಕಗಳನ್ನು ತಮ್ಮ ಹುಚ್ಚಾಟಕ್ಕೆ ಬಳಸಿಕೊಳ್ಳುವುದು ಒಳ್ಳೆಯಲ್ಲ. (ದಿಗ್ವಿಜಯ ನ್ಯೂಸ್​)

    ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: FIR ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ ಯುವಕ

    ಉದ್ಯಮ ಉತ್ತೇಜನ: ರಾಜ್ಯದಲ್ಲಿ ಆಪಲ್ ಫೋನ್ ಘಟಕ ಸ್ಥಾಪನೆಗೆ ಆಸಕ್ತಿ

    ವಿಶೇಷ ಕ್ರಿಕೆಟರ್ ಸೈಯಾಮಿ; ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಚಿತ್ರದಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts